ಚನ್ನಗಿರಿ, ಆ.2- ತಾಲ್ಲೂಕಿನ ದೇವರಹಳ್ಳಿ ಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯಕ್ಕೆ 6ನೇ ತರಗತಿ ಪ್ರವೇಶಾತಿ ಪರೀಕ್ಷೆಗೆ ಜಿಲ್ಲೆಯ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು 2012ರ ಮೇ ರಿಂದ 2014ರ ಜುಲೈ ಮಾಹೆಯೊಳಗೆ ಜನಿಸಿದವರಾಗಿರಬೇಕು. ಜಿಲ್ಲೆಯ ಸರ್ಕಾರಿ ಶಾಲೆ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 3 ಮತ್ತು 4 ನೇ ತರಗತಿಯನ್ನು ಪೂರ್ಣಗೊಳಿಸಿ, ಪ್ರಸಕ್ತ ಸಾಲಿನಲ್ಲಿ 5 ನೇ ತರಗತಿ ಅಧ್ಯಯನ ಮಾಡುತ್ತಿರಬೇಕು. ಅರ್ಹ ವಿದ್ಯಾರ್ಥಿಗಳು ಆಗಸ್ಟ್ 10 ರೊಳಗಾಗಿ ವಿದ್ಯಾಲಯದ ಅಧಿಕೃತ ವೆಬ್ಸೈಟ್ https://navodaya.gov.in ನಿಂದ ದಾಖಲೆ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು.
2024 ಜನವರಿ 20 ಪ್ರವೇಶ ಪರೀಕ್ಷಾ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆರ್.ಜಿ ಬಡಿಗೇರ್-6363998301, ರವೀಂದ್ರ. ಡಿ.ಕೆ-9741194198, ಎಂ.ವೈ. ಕುರುಗುಂದ (ಚನ್ನಗಿರಿ)-9483738275, ತಿಪ್ಪೇಸ್ವಾಮಿ (ದಾವಣಗೆರೆ ಉತ್ತರ)-78923 07035, ಸೌರಭ (ದಾವ ಣಗೆರೆ ದಕ್ಷಿಣ)-94827 31680, ನಾಗೇಶ್ (ಹರಿಹರ)-94499 41170, ಹಿರೇಮಠ (ಹೊನ್ನಾಳಿ)-94482 94794, ದತ್ತಾತ್ರೇಯ ಕೆ. (ಜಗಳೂರು)-7483073517 ಸಂಪರ್ಕಿಸಲು ಜವಾಹರ್ ನವೋದಯ ವಿದ್ಯಾಲಯ, ದೇವರಹಳ್ಳಿ, ಪ್ರಾಂಶುಪಾಲ ವಿಜಯ ಎ. ಅವರು ತಿಳಿಸಿದ್ದಾರೆ.