ಸಾಣೇಹಳ್ಳಿ, ಜು. 21- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎ. ಆರ್. ಉಜ್ಜನಪ್ಪನವರ ನಿಧನಕ್ಕೆ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಜನಪರ ಸೇವಾ ಕಾರ್ಯಗಳಲ್ಲಿ ಸದಾ ಮುಂದಿರುತ್ತಿದ್ದ ಉಜ್ಜನಪ್ಪನವರಿಗೆ ಸಾಣೇಹಳ್ಳಿಯ ರಂಗಚಟುವಟಿಕೆಗಳ ಬಗ್ಗೆ ವಿಶೇಷ ಒಲವಿತ್ತು. `ಮತ್ತೆ ಕಲ್ಯಾಣ’ ಅಭಿಯಾನ ದಾವಣಗೆರೆಯಲ್ಲಿ ನಡೆದಾಗ ಲವಲವಿಕೆಯಿಂದ ಓಡಾಡಿ ಅದರ ಯಶಸ್ಸಿಗೆ ಕಾರಣರಾದವರಲ್ಲಿ ಅವರೂ ಒಬ್ಬರು ಎಂದು ಶ್ರೀಗಳು ಸ್ಮರಿಸಿದ್ದಾರೆ.
ಅವರ ಅನಿರೀಕ್ಷಿತ ಮರಣ ವಾರ್ತೆಯನ್ನು ಕೇಳಿ ತುಂಬಾ ವೇದನೆಯಾಯ್ತು. ಅವರ ಅಗಲುವಿಕೆಯಿಂದ ಆಗಿರುವ ದುಃಖವನ್ನು ಸಹಿಸುವ ಶಕ್ತಿಯನ್ನು ಬಸವಾದಿ ಶರಣರಲ್ಲಿ ಅವರ ಮನೆತನದ ಸದಸ್ಯರುಗಳಿಗೆ, ಬಂಧು ಬಳಗಕ್ಕೆ, ಮಿತ್ರರಿಗೆ ಕರುಣಿಸಲಿ ಎಂದು ಸ್ವಾಮೀಜಿ ಪ್ರಾರ್ಥಿಸಿದ್ದಾರೆ.