ಕೆಲಸ ಕೊಡಿಸುವುದಾಗಿ ಹೇಳಿ ವಂಚನೆ

ದಾವಣಗೆರೆ, ಜು. 26- ಎನ್‌.ಜಿ.ಓ. ಮಾಡಿಕೊಂಡಿರುವುದಾಗಿ ಪರಿಚಯ ಮಾಡಿಕೊಂಡು, ನ್ಯಾಷನಲ್ ಇನ್‌ಫಾರ್ಮೆಟಿಕ್ ಸೆಂಟರ್‌ನಲ್ಲಿ ಗ್ರೇಡ್ ಆಫೀಸರ್ ಮೊದಲಾದ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಕೊಡಿಸುವುದಾಗಿ ಹೇಳಿ ತನ್ನನ್ನೂ ಸೇರಿದಂತೆ ಆರು ಜನರಿಗೆ ನಂಬಿಸಿ ಅವರಿಂದ 13, 76, 000 ರೂ.ಗಳನ್ನು ಪಡೆದಿದ್ದಾರೆ. 

ಎನ್.ಐ.ಸಿ. ಡಿಪಾರ್ಟ್‌ಮೆಂಟ್ ಅಧಿಕಾರಿಗಳು ಕೊಟ್ಟ ಹಾಗೆ ಲೆಟರ್‌ಗಳನ್ನು ಟೈಪು ಮಾಡಿಸಿ, ಸೀಲು ಹಾಗೂ ಅಧಿಕಾರಿಗಳ ಸಹಿ ಇರುವ ಲೆಟರ್‌ಗಳನ್ನು ಕೊಟ್ಟು, ದಾವಣಗೆೆರೆ ಜಿಲ್ಲಾಧಿಕಾರಿಗಳ ಸಹಿ, ಸರ್ಕಾರದ ಮುಖ್ಯ ಕಾರ್ಯದರ್ಶಿಯ ಆದೇಶದ ಪ್ರತಿಗಳನ್ನು ಕೊಟ್ಟು ಇಲ್ಲಿಯವರೆಗೆ ಕೆಲಸವೂ ಇಲ್ಲದೆ ಹಣವನ್ನೂ ವಾಪಾಸ್‌ ಕೊಡದೆ ವಂಚಿಸಿದ್ದಾರೆ ಎಂದು ಎಂ.ಸಿ.ಸಿ. ಬಿ ಬ್ಲಾಕ್‌ನ ಖಾಸಗಿ ಶಾಲಾ ಶಿಕ್ಷಕ ಮಧುಸೂದನ್ ಅವರು, ವೀರಭದ್ರಪ್ಪ ಮತ್ತು ನಂದಿನಿ ಅವರುಗಳ ಮೇಲೆ ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: Content is protected !!