ಚಿಣ್ಣರಿಗಾಗಿ ಡ್ರಾಯಿಂಗ್, ಕಲರಿಂಗ್, ಶೇಡಿಂಗ್ ಸ್ಪರ್ಧೆ

ದಾವಣಗೆರೆ, ಜೂ.6- ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಬಣ್ಣಗಳ ಕನಸನ್ನು ಹೆಚ್ಚಿಸಲು ಚಿರಂತನ 6 ವರ್ಷದ ಒಳಗಿನ ಮಕ್ಕಳಿಗೆ ಇದೇ ದಿನಾಂಕ 10ರ ಶನಿವಾರ (ಚಿತ್ರಕಲೆ)  ಡ್ರಾಯಿಂಗ್ ಅಂಡ್ ಕಲರಿಂಗ್ ಸ್ಪರ್ಧೆ ನಡೆಯಲಿದೆ. 

ಶನಿವಾರ ಮಧ್ಯಾಹ್ನ 1 ರಿಂದ 2 ರವರೆಗೆ ಈ ಸ್ಪರ್ಧೆಯು ನಡೆಯಲಿದ್ದು, ಎಂ.ಸಿ.ಸಿ ಬಿ ಬ್ಲಾಕ್‌ನಲ್ಲಿರುವ ಟ್ಯಾಂಕ್ ಪಾರ್ಕ್ ಬಳಿ‌ ಇರುವ ಚಿರಂತನ ಸಂಸ್ಥೆಯಲ್ಲಿ ನಡೆಯಲಿದೆ. ವಿವರಗಳಿಗೆ 9535656163 ಅಥವಾ 9731875515 ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷರಾದ ದೀಪಾ ಎನ್. ರಾವ್ ತಿಳಿಸಿದ್ದಾರೆ.

error: Content is protected !!