ದಾವಣಗೆರೆ, ಮೇ 30- ಭದ್ರಾ ಯೋಜನೆಯ ಕಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹರಿಹರ, ಚನ್ನಗಿರಿ, ಹೊನ್ನಾಳಿ ಮತ್ತು ಭದ್ರಾವತಿ ತಾಲ್ಲೂಕಿನಲ್ಲಿ ಭದ್ರಾ ಯೋಜನೆಯ ಮಲೇಬೆನ್ನೂರು ಮತ್ತು ಆನವೇರಿ ಶಾಖಾ ಕಾಲುವೆ ಜಾಲಗಳು ಹಾದು ಹೋಗಿರುವ ಜಮೀನುಗಳಿಗೆ ಸಂಬಂಧಪಟ್ಟಂತೆ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ.
ಹರಿಹರ ತಾಲ್ಲೂಕಿಗೆ ಸಂಬಂಧಿಸಿದಂತೆ ಬಸವಾಪಟ್ಟಣ ಮತ್ತು ಮಲೇಬೆನ್ನೂರು, ಕನೀನಿನಿ ನಂ.1 ಮತ್ತು 3 ಭದ್ರಾ ನಾಲಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಚನ್ನಗಿರಿ ತಾಲ್ಲೂಕಿಗೆ ಸಂಬಂಧಿಸಿದಂತೆ ಬಸವಪಟ್ಟಣ, ಕನೀನಿನಿ ನಂ1 ಭದ್ರಾ ನಾಲಾ ಉಪ
ಭಾಗದ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್, ಹೊನ್ನಾಳಿ ತಾಲ್ಲೂಕಿಗೆ ಬಸವಾಪಟ್ಟಣ ಮತ್ತು ಸಾಸ್ವೇಹಳ್ಳಿ, ಕನೀನಿನಿ ನಂ.1
ಮತ್ತು 4 ಭದ್ರಾ ನಾಲಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮತ್ತು ಭದ್ರಾವತಿ ತಾಲ್ಲೂಕಿಗೆ ಸಾಸ್ವೇಹಳ್ಳಿ, ಕನೀನಿನಿ ನಂ.4 ಭದ್ರಾ ನಾಲಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸರ್ವೇ ಪ್ರಾರಂಭಿಸಿದ್ದಾರೆ ಎಂದು ಮಲೇಬೆನ್ನೂರು ಕಾರ್ಯಪಾಲಕ ಇಂಜಿನಿಯರ್ ಜಿ.ಎಸ್ ಪಾಟೀಲ್ ತಿಳಿಸಿದ್ದಾರೆ.