ದಾವಣ ಗೆರೆ, ಮೇ 25- ಜೀವನೋ ಪಾಯಕ್ಕೆ ಸಹಕಾರಿ ಯಾದಂತಹ ಆಹಾರ ಹಾಗೂ ನಾಗರಿಕ ಇಲಾಖೆಯು ನೀಡುವ ಬಿ.ಪಿ.ಎಲ್. ಪಡಿತರ ಕಾರ್ಡ್ ತುಂಬಾ ಮಹತ್ವವಾಗಿದೆ. ಸರ್ಕಾರದ ಮುಂದಿನ ಯೋಜನೆಗಳಾದ ಅನೇಕ ಭಾಗ್ಯಗಳು, ಗ್ಯಾರಂಟಿ ಸ್ಕೀಮ್ನ ಅಡಿಯಲ್ಲಿ ಸವಲತ್ತುಗಳನ್ನು ಪಡೆಯಲು ಬಿ.ಪಿ.ಎಲ್. ಕಾರ್ಡ್ ಅಗತ್ಯವಾಗಿದೆ. ಈಗಾಗಲೇ ಬಂದಿರುವ ಅರ್ಜಿಗಳು, ತಿದ್ದುಪಡಿಯ ಅಡಿಯಲ್ಲಿ ಬಂದಿರುವ ಅರ್ಜಿಗಳು ಹಾಗೂ ಹೊಸ ಬೇಡಿಕೆ ಅರ್ಜಿಗಳನ್ನು ಶೀಘ್ರವೇ ವಿತರಿಸಲು ಕ್ರಮ ಕೈಗೊಂಡು, ಜನಸಾಮಾನ್ಯರಿಗೆ ಸವಲತ್ತು ನೀಡಲು ಸಹಕಾರ ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಎಸ್., ಪಾಲಿಕೆ ಸದಸ್ಯರಾದ ಮಂಜುನಾಥ ಗಡಿಗುಡಾಳ್, ಎ. ನಾಗರಾಜ್ ಅವರುಗಳು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
December 27, 2024