ಚಳ್ಳಕೆರೆ, ಮೇ 14- ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ. ರಘುಮೂರ್ತಿ ಅವರು ಸತತ ಮೂರನೇ ಬಾರಿ (ಹ್ಯಾಟ್ರಿಕ್) ಜಯ ಗಳಿಸಿದ್ದಾರೆ. ರಘುಮೂರ್ತಿ ಅವರ ಅಭಿವೃದ್ಧಿ ಕಾರ್ಯಗಳು ಮತ್ತು ಆಡಳಿತ ವೈಖರಿಯ ಮಾನದಂಡದ ಆಧಾರದ ಮೇಲೆ ಮತದಾರರು ವಿಜಯಮಾಲೆ ಹಾಕಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತ ಜಿ. ಶ್ರೀನಿವಾಸ್ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ತಾಲ್ಲೂಕು ವೀರಶೈವ ಸಮಾಜದ ಉಪಾಧ್ಯಕ್ಷ ಕೆ.ಎಂ. ಜಗದೀಶ್, ಆರ್ಯವೈಶ್ಯ ಸಂಘದ ಮುಖಂಡರಾದ ಚಿದಾನಂದ ಗುಪ್ತ ಇದ್ದರು.
January 10, 2025