ಕನ್ನಡಿಗನಲ್ಲಿ ಕನ್ನಡದ ತುಡಿತವಿರಲಿ

ಕನ್ನಡಿಗನಲ್ಲಿ ಕನ್ನಡದ ತುಡಿತವಿರಲಿ

ನ್ಯಾಮತಿ : ಕಸಾಪ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಬ್ರಹ್ಮಾಕುಮಾರಿ ವಂದನಾ

ನ್ಯಾಮತಿ, ಮೇ 11 – ಕನ್ನಡ ನಾಡಿನಲ್ಲಿ ವಾಸವಿರುವ ಪ್ರತಿಯೊಬ್ಬರ ಮನಸ್ಸಿನಲ್ಲೂ ಕನ್ನಡದ ಬಗ್ಗೆ ತುಡಿತ ಇರಬೇಕು ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ಥಳೀಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ವಂದನಾ ಆಶಯ ವ್ಯಕ್ತಪಡಿಸಿದರು. 

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕನ್ನಡ ನಾಡು ನುಡಿ ಹಿತಚಿಂತಕ ಆರುಂಡಿ ಕೋಟೆ ಕರೇಗೌಡ್ರ ನಾಗರಾಜಪ್ಪ ಕನ್ನಡ ಅಸ್ಮಿತೆ-ಕನ್ನಡ ಸಾಹಿತ್ಯ ಪರಿಷತ್ತು ಕುರಿತು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯನ್ನು ಹಾಗೂ ಪ್ರಸ್ತುತ ಜನಸಾಮಾನ್ಯರ ಪರಿಷತ್ತು ಆಗಿರುವ ಬಗ್ಗೆ ಮಾತನಾಡಿದರು. 

ತಾಲ್ಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಅಂಬಿಕಾ ಬಿದರಗಡ್ಡೆ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಬಿ. ಶಿವಯೋಗಿ, ನಿಕಟ ಪೂರ್ವ ಅಧ್ಯಕ್ಷ ಜಿ. ನಿಜಲಿಂಗಪ್ಪ, ಸದಸ್ಯರಾದ ಸಿ.ಕೆ. ಭೋಜರಾಜ, ಸೈಯದ್ ಅಪ್ಸರ್ ಬಾಷ, ರೇವಣಸಿದ್ದಪ್ಪ ಮಾತನಾಡಿದರು.

ಆರುಂಡಿ ಕೆ. ಮಂಜಪ್ಪ, ಬೆಳಗುತ್ತಿ ಸಿ.ಕೆ. ಭೋಜರಾಜ, ಕವಿರಾಜ, ರೇವಣಸಿದ್ದಪ್ಪ, ಭಾಗ್ಯಲಕ್ಷ್ಮಿ ನಾಗಮೂರ್ತಿ ಕನ್ನಡ ನಾಡು ನುಡಿ ಗಾಯನ ನಡೆಸಿಕೊಟ್ಟರು. 

ನ್ಯಾಮತಿ ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಎಂ. ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಕೋಶಾಧ್ಯಕ್ಷ ಕೆ.ಎಂ. ಬಸವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಎಸ್.ಜಿ.ಬಸವರಾಜಪ್ಪ ಸ್ವಾಗತಿಸಿದರು, ಭಾಗ್ಯಲಕ್ಷ್ಮಿ ನಿರೂಪಿಸಿದರು, ಬೆಳಗುತ್ತಿ ಹೋಬಳಿ ಕಸಾಪ ಅಧ್ಯಕ್ಷ ಎಂ.ಜಿ. ಕವಿರಾಜ ವಂದಿಸಿದರು.

error: Content is protected !!