97.33% ಪಡೆದ ಸಾಗರ್ ಮತ್ತು ಸಂಜನಾ ಕಾಲೇಜಿಗೆ ಪ್ರಥಮ
ದಾವಣಗೆರೆ, ಏ. 21- ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಸಿದ್ಧಗಂಗಾ ಪಿಯು ಕಾಲೇಜು ಅತ್ಯುತ್ತಮ ಫಲಿತಾಂಶ ಪಡೆದಿದೆ.
ಕನ್ನಡ ವಿಷಯದಲ್ಲಿ 6, ಸಂಸ್ಕೃತದಲ್ಲಿ 1, ಭೌತಶಾಸ್ತ್ರದಲ್ಲಿ 9, ರಸಾಯನ ಶಾಸ್ತ್ರದಲ್ಲಿ 2, ಗಣಿತದಲ್ಲಿ 18, ಜೀವಶಾಸ್ತ್ರದಲ್ಲಿ 1 ಒಟ್ಟು 37 ಬಾಲಕ-ಬಾಲಕಿಯರು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. 37 ಮಕ್ಕಳು ಶೇ. 95ಕ್ಕಿಂತ ಹೆಚ್ಚು, 151 ಮಕ್ಕಳು ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.
291 ಅತ್ಯುತ್ತಮ ಶ್ರೇಣಿ, 322 ಪ್ರಥಮ ದರ್ಜೆ, 29 ದ್ವಿತೀಯ ದರ್ಜೆ, 4 ಮಕ್ಕಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಎಸ್.ಆರ್. ಸಾಗರ್ ಕನ್ನಡ 95, ಇಂಗ್ಲಿಷ್ 93, ಭೌತಶಾಸ್ತ್ರ 100, ರಸಾಯನ ಶಾಸ್ತ್ರ 98 ಗಣಿತ 100, ಜೀವಶಾಸ್ತ್ರ 98 ಒಟ್ಟು 584 ಅಂಕಗಳನ್ನು ಗಳಿಸಿದರೆ, ಜಿ.ಎಸ್. ಸಂಜನ ಕನ್ನಡ 100, ಇಂಗ್ಲಿಷ್ 96, ಭೌತಶಾಸ್ತ್ರ 99, ರಸಾಯನ ಶಾಸ್ತ್ರ 94, ಗಣಿತ 100, ಕಂಪ್ಯೂಟರ್ 95 ಒಟ್ಟು 584 ಅಂಕಗಳನ್ನು ಪಡೆದಿದ್ದಾರೆ. ಇಬ್ಬರೂ 97.33% ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಅತ್ಯುತ್ತಮ ಫಲಿತಾಂಶ ಪಡೆದ ಎಲ್ಲ ಮಕ್ಕಳಿಗೆ ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ ಮತ್ತು ಎಲ್ಲ ಉಪನ್ಯಾಸಕರು, ಆಡಳಿತ ಮಂಡಳಿ ಅಭಿನಂದಿಸಿದೆ.