ಜಿಲ್ಲೆಯ 7 ಕ್ಷೇತ್ರಗಳಲ್ಲಿ ಸಲ್ಲಿಸಲಾಗಿದ್ದ 9 ನಾಮಪತ್ರಗಳು ತಿರಸ್ಕೃತವಾಗಿದ್ದು ಇದರಲ್ಲಿ ಹರಿಹರ 1, ಮಾಯಕೊಂಡ 7, ಚನ್ನಗಿರಿ 1 ಸೇರಿದೆ
ದಾವಣಗೆರೆ, ಏ. 21- ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಏಪ್ರಿಲ್ 21 ರಂದು ನಡೆಸಿದ ನಾಮಪತ್ರಗಳ ಪರಿಶೀಲನೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳಿಂದ 106 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಏಪ್ರಿಲ್ 13 ರಿಂದ 20 ರ ವರೆಗೆ ಒಟ್ಟು 164 ನಾಮಪತ್ರಗಳನ್ನು ಸ್ವೀಕರಿಸಲಾಗಿತ್ತು. ಇದರಲ್ಲಿ 153 ಪುರುಷ ಹಾಗೂ 11 ಮಹಿಳೆಯರಿಂದ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಪರಿಶೀಲನೆ ನಂತರ 99 ಪುರುಷ, 7 ಮಹಿಳಾ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ.
ಬಿಜೆಪಿ 7, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 7, ಆಮ್ ಆದ್ಮಿ 6, ಬಿಎಸ್‌ಪಿ 4, ಜೆಡಿಎಸ್ 7, ಇತರೆ ಪಕ್ಷಗಳು 20 ಹಾಗೂ 55 ಪಕ್ಷೇತರ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ.
ಕ್ರಮಬದ್ದ ಅಭ್ಯರ್ಥಿಗಳ ವಿವರ – ಜಗಳೂರು: ಎಂ.ಓ.ದೇವರಾಜ್ ಜನತಾದಳ (ಜಾತ್ಯತೀತ), ಬಿ.ದೇವೇಂದ್ರಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಎಸ್.ವಿ.ರಾಮಚಂದ್ರಪ್ಪ ಭಾರತೀಯ ಜನತಾ ಪಕ್ಷ, ಜಿ.ಸ್ವಾಮಿ ಸಮಾಜವಾದಿ ಪಕ್ಷ, ಪಿ.ಅಜ್ಜಯ್ಯ, ಇಂದಿರಾ.ಎಸ್.ಆರ್, ಡಿ.ತಿಪ್ಪೇಸ್ವಾಮಿ, ದಿವಾಕರ್.ಓ, ನಾಗರಾಜ.ಎಂ, ಭೀಮಪ್ಪ.ಜಿ.ಎನ್, ರಾಘವೇಂದ್ರ.ಕೆ.ಆರ್, ಹೆಚ್.ಪಿ. ರಾಜೇಶ್ ಇವರು ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.
ಹರಿಹರ: ಗಣೇಶಪ್ಪ ದುರ್ಗದ ಆಮ್ ಆದ್ಮಿ ಪಾರ್ಟಿ, ಹೆಚ್.ಎಸ್.ಶಿವಶಂಕರ್ ಜನತಾದಳ (ಜಾತ್ಯತೀತ), ಶ್ರೀನಿವಾಸ.ಎನ್.ಹೆಚ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಡಿ.ಹನುಮಂತಪ್ಪ ಬಹುಜನ್ ಸಮಾಜ ಪಾರ್ಟಿ, ಬಿ.ಪಿ.ಹರೀಶ್ ಭಾರತೀಯ ಜನತಾ ಪಾರ್ಟಿ, ಕೃಷ್ಣ.ಎಂ ಉತ್ತಮ ಪ್ರಜಾಕೀಯ ಪಾರ್ಟಿ, ಸಂಕೇತ.ಎಸ್ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ, ಬಿ.ಎಸ್ ಉಜ್ಜನಪ್ಪ, ಕರಿಬಸಪ್ಪ ಮಠದ ವೀ, ಜಯ ಕುಮಾರ.ಟಿ.ಹೆಚ್, ಪರಶುರಾಮ.ಎಂ, ಮೂರ್ತಿ.ಹೆಚ್.ಕೆ ಇವರು ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.
ದಾವಣಗೆರೆ ಉತ್ತರ : ಕೆ.ಹೆಚ್ ನಾಗರಾಜ್ ಭಾರತೀಯ ಜನತಾ ಪಾರ್ಟಿ, ಎಸ್.ಎಸ್ ಮಲ್ಲಿಕಾರ್ಜುನ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಎಂ.ಜಿ.ಶಿವಶಂಕರ್ ಜನತಾದಳ (ಜಾತ್ಯತೀತ), ಶ್ರೀಧರ್ ಪಾಟೀಲ್ ಸಿ. ಆಮ್ ಆದ್ಮಿ ಪಾರ್ಟಿ, ಚಂದ್ರಶೇಖರ.ಬಿ ಉತ್ತಮ ಪ್ರಜಾಕೀಯ ಪಾರ್ಟಿ, ಕೆ.ಮಲ್ಲಣ್ಣ ಕರ್ನಾಟಕ ರಾಷ್ಟ್ರೀಯ ಸಮಿತಿ, ಸುರ್ಜಿತ್. ಜಿ ಸಂಯುಕ್ತ ವಿಕಾಸ್ ಪಾರ್ಟಿ, ಕೆ.ಜಿ.ಅಜ್ಜಪ್ಪ, ಕೀರ್ತಿಕುಮಾರ್.ಕೆ.ಎಸ್, ನಾಗಾರ್ಜುನ್.ಜಿ.ಆರ್, ಮಲ್ಲಿಕಾರ್ಜುನಪ್ಪ.ಕೆ.ಎಂ, ಮಹಮ್ಮದ್ ಹಯಾತ್.ಎಮ್, ಮಂಜುನಾಥ ಎನ್, ರುದ್ರೇಶ.ಕೆ.ಹೆಚ್, ಶ್ರೀಕಾಂತ್ ಎ, ಎಂ.ಜಿ.ಶ್ರೀಕಾಂತ್ ಇವರು ಪಕ್ಷೇತರ ಅಭ್ಯರ್ಥಿಗಳು.
ದಾವಣಗೆರೆ ದಕ್ಷಿಣ: ಅಜಯ್ ಕುಮಾರ್.ಬಿ.ಜಿ. ಭಾರತೀಯ ಜನತಾ ಪಾರ್ಟಿ, ಜೆ.ಅಮಾನುಲ್ಲಾ ಖಾನ್ ಜನತಾದಳ (ಜಾತ್ಯತೀತ), ಮೊಹ್ಮದ್ ಕಲೀಂ ಬಹುಜನ ಸಮಾಜ ಪಾರ್ಟಿ, ಶಾಮನೂರು ಶಿವಶಂಕರಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಸಾಜಿದ್ ಆಮ್ ಆದ್ಮಿ ಪಾರ್ಟಿ, ಇಸ್ಮಾಯಿಲ್ ಜಬೀವುಲ್ಲಾ ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಈಶ್ವರ ಉತ್ತಮ ಪ್ರಜಾಕೀಯ ಪಕ್ಷ, ಗೌಸ್‌ಪೀರ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಹೆಚ್.ಕೆ ದಾವಲ್ ಸಾಬ್ ಕರ್ನಾಟಕ ರಾಷ್ಟ್ರ ಸಮಿತಿ, ಭಾರತಿ.ಕೆ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), ಎಸ್.ಕೆ ಅಫ್ಜಲ್ ಖಾನ್, ಈರಣ್ಣ, ದಿಲ್ ಜಾನ್ ಖಾನ್, ಬಿ.ನಾಗೇಶ್ವರ ರಾವ್, ನೌಶಿನ್‌ತಾಜ್, ಎಂ.ಬಿ.ಪ್ರಕಾಶ, ಬರ್ಕಾತ್ ಅಲಿ, ಮಹಮದ್ ರಿಯಾಜ್‌ಸಾಬ್, ಬಿ.ರಾಜಶೇಖರ್, ಎಂ.ರಾಜಾಸಾಬ್, ಜಿ.ಆರ್.ಶಿವಕುಮಾರಸ್ವಾಮಿ, ಷೇಕ್ ಅಹಮದ್, ಸುಭಾನ್ ಖಾನ್ ಇವರು ಪಕ್ಷೇತರ ಅಭ್ಯರ್ಥಿಗಳು.
ಮಾಯಕೊಂಡ: ಹೆಚ್.ಆನಂದಪ್ಪ ಜನತಾದಳ (ಜಾತ್ಯತೀತ), ಧರ್ಮನಾಯ್ಕ ಎಸ್. ಆಮ್ ಆದ್ಮಿ ಪಾರ್ಟಿ, ಕೆ.ಎಸ್.ಬಸವರಾಜ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಎಂ ಬಸವರಾಜ ನಾಯ್ಕ ಭಾರತೀಯ ಜನತಾ ಪಾರ್ಟಿ, ಅಜ್ಜಪ್ಪ.ಎನ್ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ, ಚೇತನ್‌ಕುಮಾರ್ ನಾಯ್ಕ ಕೆ ಉತ್ತಮ ಪ್ರಜಾಕೀಯ ಪಕ್ಷ, ಎನ್.ಶಾಂತಬಾಯಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಸೋಮಶೇಖರ.ಬಿ ಕರ್ನಾಟಕ ರಾಷ್ಟ್ರ ಸಮಿತಿ, ಎ.ಕೆ.ಗಣೇಶ್, ಪುಷ್ಪ ಬಿ.ಎಂ, ಮಂಜುನಾಥ.ಎ.ಕೆ, ಲೋಕೇಶ್.ಪಿ.ಡಿ, ಜಿ.ಎಸ್.ಶ್ಯಾಮ್, ಶಿವಾನಂದ ಯಾನೆ ಶಿವಾನಂದ.ಆರ್, ಶಿವಪ್ರಕಾಶ.ಆರ್.ಎಲ್, ಪಿ.ಆರ್.ಶ್ರೀನಿವಾಸ್, ಸವಿತಾಬಾಯಿ ಮಲ್ಲೇಶನಾಯ್ಕ ಇವರುಗಳು ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.
ಚನ್ನಗಿರಿ: ಆದಿಲ್ ಖಾನ್.ಎಸ್.ಕೆ ಆಮ್ ಆದ್ಮಿ ಪಕ್ಷ, ಟಿ.ವಿ.ಪಟೇಲ್ ಜನತಾದಳ (ಜಾತ್ಯತೀತ), ಪ್ರವೀಣ.ಹೆಚ್ ಬಹುಜನ ಸಮಾಜ ಪಕ್ಷ, ಬಸವರಾಜು.ವಿ. ಶಿವಗಂಗಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಹೆಚ್.ಎಸ್.ಶಿವಕುಮಾರ್ ಭಾರತೀಯ ಜನತಾ ಪಕ್ಷ, ಚಂದ್ರಶೇಖರ ಹೆಚ್ ಉತ್ತಮ ಪ್ರಜಾಕೀಯ ಪಕ್ಷ, ಜಿ.ಎಂ ಮಂಜುನಾಥ ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷ, ಎಂ.ರೂಪ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಕುಬೇಂದ್ರ ಸ್ವಾಮಿ.ಟಿ, ಚಂದ್ರಪ್ಪ.ವಿ, ಎಂ.ವಿ.ಮಲ್ಲಿಕಾರ್ಜುನ, ರಂಗನಾಥ.ಬಿ, ಕೆ.ಶಿವಲಿಂಗಪ್ಪ, ಹೆಚ್.ಆರ್.ಹರೀಶ್ ಇವರು ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.
ಹೊನ್ನಾಳಿ: ಕೃಷ್ಣಪ್ಪ ಬಹುಜನ ಸಮಾಜ ಪಾರ್ಟಿ, ನರಸಿಂಹಪ್ಪ.ಕೆ ಆಮ್ ಆದ್ಮಿ ಪಾರ್ಟಿ, ಎಂ.ಪಿ.ರೇಣುಕಾಚಾರ್ಯ ಭಾರತೀಯ ಜನತಾ ಪಾರ್ಟಿ, ಶಾಂತನಗೌಡ.ಡಿ.ಜಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಬಿ.ಜಿ.ಶಿವಮೂರ್ತಿ ಜನತಾದಳ (ಜಾತ್ಯತೀತ), ಗಣೇಶ.ಬಿ.ಎ ಉತ್ತಮ ಪ್ರಜಾಕೀಯ ಪಾರ್ಟಿ, ಎ.ಕೆ ಹನುಮಂ ತಪ್ಪ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಕಿರಣ.ಎಲ್.ಎಸ್, ಡಿ.ಚಂದ್ರಶೇಖರಪ್ಪ, ರಂಗನಾಥ ಸ್ವಾಮಿ.ಎ, ಲಕ್ಷ್ಮಿಕಾಂತ.ಹೆಚ್.ಟಿ, ವಾಸಪ್ಪ ಇವರುಗಳು ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.