ದಾವಣಗೆರೆ, ಏ. 21- ಈಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಪಿ.ಜೆ. ಬಡಾವಣೆಯ ಶ್ರೀಮತಿ ಸುಂದರಮ್ಮ ರಾಜನಹಳ್ಳಿ ಲಕ್ಷ್ಮಣಶೆಟ್ಟಿ ಮಹಿಳಾ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ ಲಭಿಸಿರುತ್ತದೆ. ಕಲಾ ವಿಭಾಗದಲ್ಲಿ ಶೇ.77ರಷ್ಟು ಫಲಿತಾಂಶ ಲಭಿಸಿದ್ದು, 3 ಅತ್ಯುತ್ತಮ, 14 ಉನ್ನತ ದರ್ಜೆಯಲ್ಲಿ ಹಾಗೂ ಉಳಿದ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಶೇ. 87 ರಷ್ಟು ಫಲಿತಾಂಶ ಲಭಿಸಿದ್ದು, 5 ಅತ್ಯುನ್ನತ, 33 ಪ್ರಥಮ ಹಾಗೂ 12 ವಿದ್ಯಾರ್ಥಿನಿಯರು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
January 16, 2025