ಕೊಟ್ಟೂರು, ಏ. 12 – ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಮತದಾರರು ನಿರ್ಭಯವಾಗಿ ಮತದಾನ ಮಾಡಬೇಕು. ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಪಿಡ್ ಆಕ್ಷನ್ ಫೋರ್ಸ್ ವತಿಯಿಂದ ಕೊಟ್ಟೂರು ಪೊಲೀಸ್ ಠಾಣೆಯ ಸಹಕಾರದೊಂದಿಗೆ ಕೊಟ್ಟೂರು ಪಟ್ಟಣದಲ್ಲಿ ಪಂಥ ಸಂಚಲನ ಕೈಗೊಂಡರು.
ಕೊಟ್ಟೂರು ಪಟ್ಟಣದಲ್ಲಿ ವಿವಿಧ ಪ್ರಮುಖ ಬೀದಿಗಳಲ್ಲಿ ಪಂಥ ಸಂಚಲನ ನಡೆಸಲಾಯಿತು. ಸಂಚರಿಸಿ ಮತದಾರರಲ್ಲಿ ಭಯದ ವಾತಾವರಣ ಹೋಗಲಾಡಿಸಿದರು. ಪಥ ಸಂಚಲನ ಕೇಂದ್ರ ಭದ್ರತಾ ಪಡೆ ಮತ್ತು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ನಡೆಯಿತು.
ಈ ಸಂದರ್ಭದಲ್ಲಿ ಕೊಟ್ಟೂರು ಸರ್ಕಲ್ ಇನ್ಸ್ಪೆಕ್ಟರ್, ಕೊಟ್ಟೂರು ಪಿಎಸ್ಐ, ಎಎಸ್ಐ, ಕೂಡ್ಲಿಗಿ ಡಿವೈಎಸ್ಪಿ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.