Author: Janathavani (Janathavani website)

Home Janathavani

ಡಿಸಿಎಂ ಟೌನ್‌ಶಿಪ್‌ನಲ್ಲಿ ಇಂದು 19ನೇ ವರ್ಷದ ಮಹಾಶಿವರಾತ್ರಿ

ಡಿಸಿಎಂ ಟೌನ್‌ಶಿಪ್ ನಾಗರಿಕರ ಸಂಘದಿಂದ ಇಂದು 19ನೇ ವರ್ಷದ ಮಹಾಶಿವರಾತ್ರಿ ಜಾಗರಣೆ, ಹಬ್ಬದ ಭಕ್ತಿ ಸಿಂಚನ-ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬಿಐಇಟಿ ಆವರಣದ ಶಿವಧ್ಯಾನ ಮಂದಿರದಲ್ಲಿಂದು ಭಕ್ತಿ ಮಂಜರಿ

ಬಿಐಇಟಿ ಕಾಲೇಜು ಮೈದಾನದಲ್ಲಿರುವ ಶಿವಧ್ಯಾನ ಮಂದಿರದಲ್ಲಿ ಇಂದು ಮಹಾಶಿವರಾತ್ರಿ ಪ್ರಯುಕ್ತ ಖ್ಯಾತ ಹಿಂದೂಸ್ಥಾನಿ ಗಾಯಕರಾದ ಶ್ರೀಮತಿ ಎಂ.ಡಿ. ಪಲ್ಲವಿ ಇವರಿಂದ ಭಕ್ತಿ ಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ನಗರದ ಪಂಚ ದೇವಸ್ಥಾನದಲ್ಲಿಂದು ಶಿವರಾತ್ರಿ ಅಭಿಷೇಕ, ವಿಶೇಷ ಪೂಜೆ

ಪಂಚ ದೇವಸ್ಥಾನಗಳ ಮಹಾಕ್ಷೇತ್ರದಲ್ಲಿ ಶ್ರೀ ಕಾಶಿ ಮಹಾಲಿಂಗೇಶ್ವರನಿಗೆ ಹಾಗೂ ಶ್ರೀ ಶನೇಶ್ವರ ಸ್ವಾಮಿಗೆ  ಶಿವರಾತ್ರಿ ಅಭಿಷೇಕ, ವಿಶೇಷ ಪೂಜೆ,  ಪಿ.ಬಿ ರಸ್ತೆ  ಕರೂರ್ ಕ್ರಾಸ್‌ ಹತ್ತಿರ ಇರುವ ಪಂಚ ದೇವಸ್ಥಾನಗಳ ಮಹಾಕ್ಷೇತ್ರದಲ್ಲಿ ಇಂದು  ಸಂಜೆ 6 ಗಂಟೆಗೆ ದೇವಸ್ಥಾನ ದಿಂದ ಶಿವರಾತ್ರಿ ಪ್ರಯುಕ್ತ  ಉಚಿತ ರುದ್ರಾಕ್ಷಿ ನೀಡಲಾಗುವುದು.

ರಾಣೇಬೆನ್ನೂರಿನಲ್ಲಿ ಇಂದು ದೊಡ್ಡಾಟ ಪ್ರದರ್ಶನ

ಇಂದು ರಾತ್ರಿ 8 ಗಂಟೆಗೆ ವಿದ್ಯಾನಗರದ ವೀರಾಂಜನೇಯ ದೇವಸ್ಥಾನದಲ್ಲಿ ಹುಬ್ಬಳ್ಳಿಯ ಜನಪದ ಕಲಾ ಬಳಗದಿಂದ `ಶ್ರೀ ರಾಮಚಂದ್ರ’ ದೊಡ್ಡಾಟ ಪ್ರದರ್ಶನ ಏರ್ಪಡಿಸಲಾಗಿದೆ. ಮಾಜಿ ಶಾಸಕ ಅರುಣಕುಮಾರ ಪೂಜಾರ ಉದ್ಘಾಟಿಸುವರು.

ಶಿವರಾತ್ರಿ ವಿಶೇಷ ಪೂಜೆ

ಶಿವಕುಮಾರಸ್ವಾಮಿ ಬಡಾವಣೆಯ 2 ನೇ ಮುಖ್ಯರಸ್ತೆಯಲ್ಲಿರುವ ಶ್ರೀ ಈಶ್ವರ-ವಿನಾಯಕ ದೇವಸ್ಥಾನದಲ್ಲಿ ಮಹಾಶಿವ ರಾತ್ರಿ ಪ್ರಯುಕ್ತ ಇಂದು ದೇವರಿಗೆ ಅಭಿ ಷೇಕ, ಸಂಜೆ ವಿಶೇಷ ಹೂವಿನ ಅಲಂಕಾರ ಮತ್ತು ವಿಶೇಷ ಪೂಜೆ ನಡೆಯಲಿದೆ.

ನಗರದ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಇಂದು – ನಾಳೆ ವಿಶೇಷ ಕಾರ್ಯಕ್ರಮ

ಕನ್ನಿಕಾಪರಮೇಶ್ವರಿ ದೇವಸ್ಥಾನ ರಸ್ತೆಯಲ್ಲಿರುವ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಇಂದು ಮತ್ತು ನಾಳೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮಲೇಬೆನ್ನೂರಿನಲ್ಲಿ ಇಂದು 108 ಶಿವಲಿಂಗಗಳ ಬೃಹತ್ ಶೋಭಾ ಯಾತ್ರೆ

ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಇಂದು ಮಲೇಬೆನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ 108 ಶಿವಲಿಂಗಗಳ ಬೃಹತ್ ಶೋಭಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಇಂದು ಶಿವಸ್ಮರಣೆ ನೃತ್ಯ ಜಾಗರಣೆ

ನಮನ ಅಕಾಡೆಮಿಯಿಂದ ನಾಳೆ ದಿನಾಂಕ 8ರ ಶುಕ್ರವಾರ ನಡೆಯಲಿರುವ ಶಿವರಾತ್ರಿ ಹಬ್ಬದಂದು  ವಿದುಷಿ ಮಾಧವಿ ಡಿ.ಕೆ. ಹಾಗೂ ಅವರ ಶಿಷ್ಯಂದಿರಿಂದ ಶಿವಸ್ಮರಣೆ ನೃತ್ಯ ಜಾಗರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಮನ ಅಕಾಡೆಮಿ ಉಪಾಧ್ಯಕ್ಷ ದಿನೇಶ್ ಕೆ.ಶೆಟ್ಟಿ ಹೇಳಿದರು.

ಕೆಟಿಜೆ ನಗರದಲ್ಲಿಂದು ಶಿವರಾತ್ರಿ

ಕೆಟಿಜೆ ನಗರ 10ನೇ ಕ್ರಾಸ್‌ನಲ್ಲಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಇಂದು ಸಂಜೆ 7 ಗಂಟೆಗೆ ಮಹಾಶಿವರಾತ್ರಿಯ ವಿಶೇಷ ಪೂಜೆಗಳು ನಡೆಯಲಿವೆ ಎಂದು ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪ ತಿಳಿಸಿದ್ದಾರೆ.

ಬಿಲ್ವಪತ್ರೆ, ಹಸುವಿನ ಹಾಲು ವಿತರಣೆ

ಶಿವರಾತ್ರಿ ಪ್ರಯುಕ್ತ ಬಿಲ್ವಪಾತ್ರೆ, ಅಭಿಷೇಕಕ್ಕೆ ಹಸುವಿನ ಹಾಲನ್ನು ವಿನೋಬನಗರ 4ನೇ ಮುಖ್ಯ ರಸ್ತೆ, ಪಾರ್ಕ್ ಹತ್ತಿರ ಇಲ್ಲಿ ಉಚಿತವಾಗಿ ವಿತರಣೆ ಮಾಡಲಾ ಗುವುದು.

ರೇವಣಸಿದ್ದಯ್ಯ

ದಾವಣಗೆರೆ ತಾಲ್ಲೂಕು ಹಳೇಬಾತಿ ಗ್ರಾಮದ ವಾಸಿ ಮಠದ ರೇವಣಸಿದ್ದಯ್ಯ (67) ಇವರು ದಿನಾಂಕ 07.03.2024ರ ಗುರುವಾರ ಮಧ್ಯಾಹ್ನ 3.30ಕ್ಕೆ ಶಿವಾಧೀನರಾದರು.

error: Content is protected !!