ಒಂದೇ ವರ್ಷ ಎರಡು ಕೋರ್ಸ್‌ಗೆ ಅವಕಾಶ !

ಮಾನ್ಯರೇ,

ನಮ್ಮ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ನಂತರ  ಐಟಐ , ಪಿಯುಸಿ, ಡಿಪ್ಲೋಮಾ ಹೀಗೆ ಅವರ ಇಚ್ಚೆ, ಅವಕಾಶಗಳಿಗನುಗುಣವಾಗಿ ಯಾವುದಾದರೂ ಒಂದು ಕೋರ್ಸಿಗೆ ಮಾತ್ರ ಪ್ರವೇಶ ಪಡೆಯಬಹುದು. ಆದರೆ ಎಸ್ಸೆಸ್ಸೆಲ್ಸಿಯ ಅಂಕಪಟ್ಟಿ ಮತ್ತು ವರ್ಗಾವಣೆ ಪತ್ರವನ್ನು ವಿದ್ಯಾರ್ಥಿ ಸಂಸ್ಥೆಗೆ ಒಪ್ಪಿಸಿ ದಾಖಲಾಗಬೇಕಾಗುತ್ತದೆ.

ವಿಪರ್ಯಾಸವೆಂದರೆ ಐಟಿಐಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಸರ್ಕಾರಿ ಮತ್ತು ಖಾಸಗಿ ಯಾವುದೇ ಕಾಲೇಜಿನಲ್ಲಿ ವರ್ಗಾವಣೆ ಪತ್ರವನ್ನು ಪಡೆಯದೇ ಇರುವುದರಿಂದ ವಿದ್ಯಾರ್ಥಿ ವರ್ಗಾವಣೆ ಪತ್ರ ಮತ್ತು ತಾತ್ಕಾಲಿಕ ಅಂಕಪಟ್ಟಿ ಮೇಲೆ  ಪಿಯುಸಿಗೆ ದಾಖಲಾಗಿ ನಂತರ ಕೇವಲ ಅಂಕಪಟ್ಟಿ ಆಧಾರದ ಮೇಲೆ ಐಟಿಐಗೆ ಸೇರ್ಪಡೆಗೊಂಡು ಒಂದೇ ಶೈಕ್ಷಣಿಕ ವರ್ಷಗಳಲ್ಲಿ ಎರಡು ಕೋರ್ಸ್‌ಗಳನ್ನು   ಪೂರೈಸಲು ಅವಕಾಶ ನೀಡಿರುವುದು ಹಾಸ್ಯಾಸ್ಪದ.

ಎಸ್‌ಎಟಿಎಸ್‌ ತಂತ್ರಾಂಶ ಐಟಿಐಗೆ ಅನ್ವಯಿಸದೇ ಇರುವುದರಿಂದ, ಮತ್ತು ವರ್ಗಾವಣೆ ಪತ್ರವನ್ನು    ಪಡೆ ಯದೇ ದಾಖಲು ಮಾಡಿಕೊಳ್ಳುತ್ತಿರು ವುದರಿಂದ  ಹೀಗೆ ಎರಡು ದೋಣಿಗಳಲ್ಲಿ ಚಲಿಸಲು ಅವಕಾಶವಾಗಿದೆ. ಇನ್ನು ಕೊರೊನಾ ಹಿನ್ನೆಲೆಯಲ್ಲಿ ಹಾಜರಾತಿ ಕಡ್ಡಾಯವಿಲ್ಲದ ಕಾರಣ  ಇಂತಹ ಅನಾಹುತಗಳಿಗೆ ಅವಕಾಶ ನೀಡಿದಂತಾಗಿದೆ. ಸಂಬಂಧಪಟ್ಟ ಇಲಾಖೆ ಗಳು  ಗಮನಹರಿಸಿ, ಸರಿಪಡಿಸುವುದು ತುರ್ತಾಗಿದೆ.


– ಎಸ್.ಜಿ.ದಾಸ್, ದಾವಣಗೆರೆ.

error: Content is protected !!