ಹಳ್ಳಿಗಳಲ್ಲಿ ಧರ್ಮ, ಸಂಸ್ಕೃತಿ ಉಳಿದಿದೆ

ನಂದಿತಾವರೆ : ದುರ್ಗಾದೇವಿ ದೇಗುಲದ ಲೋಕಾರ್ಪಣೆಯಲ್ಲಿ ಶ್ರೀ ಶಾರದೇಶಾನಂದ ಸ್ವಾಮೀಜಿ ಸಂತಸ

ಮಲೇಬೆನ್ನೂರು, ಫೆ.13- ಹಳ್ಳಿಗ ಳಲ್ಲಿ ಮಾತ್ರ ಧರ್ಮ, ಸಂಪ್ರದಾಯ, ಸಂಸ್ಕೃತಿ, ಜಾನಪದ ಕಲೆಗಳು ಮತ್ತು ಧಾರ್ಮಿಕ ಕ್ರಿಯೆ ಉಳಿದಿವೆ ಎಂದು ಹರಿಹರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಶಾರದೇಶಾನಂದ ಮಹಾರಾಜ್‌ ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ನಂದಿತಾವರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ದುರ್ಗಾದೇವಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು. 

ಗ್ರಾಮಗಳಲ್ಲಿ ಹಿರಿಯರಿಗೆ ಗೌರವ, ದೇವರ ಬಗ್ಗೆ ಶ್ರದ್ಧೆೆ, ಆಚಾರ, ವಿಚಾರಗಳನ್ನು ಕಾಣಬಹುದು. ದೇವಾಲಯಗಳು ಹಳ್ಳಿಯ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವ ಜೊತೆಗೆ ಭಕ್ತಿ, ಭಾವ, ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುತ್ತವೆ ಎಂದರು. ರಾಂಪುರದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸಮ್ಮುಖದಲ್ಲಿ ಗಂಗಾ ಪೂಜೆ, ಮಹಾಗಣಪತಿ ಪೂಜೆ, ಕಳಸ ಪೂಜೆ, ದುರ್ಗಾ ಹೋಮ ನೆರವೇರಿಸಲಾಯಿತು. ಗ್ರಾಮದ ಎನ್‌.ಪಿ. ಬಸವಲಿಂಗಪ್ಪ, ಸುರೇಂದ್ರಗೌಡ, ಬಸವನಗೌಡ, ಶಂಭಣ್ಣ, ರೇವಣಸಿದ್ದಪ್ಪ, ರಾಜಪ್ಪ ಛಲವಾದಿ, ಹರೀಶ್‌ ಸೇರಿದಂತೆ ನಂದಿತಾವರೆ, ಕುಣೆಬೆಳಕೆರೆ ಮತ್ತಿತರೆ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

error: Content is protected !!