ಪೇಪರ್ ತಯಾರಿಸಲು ಮರಗಳ ಬಳಕೆ ಪರಿಸರ ನಾಶಕ್ಕೆ ದಾರಿ

ಮಾನ್ಯರೇ,

ನಿಮಗೆಲ್ಲಾ ತಿಳಿದಿರುವಂತೆ ಪೇಪರ್ ತಯಾರಿಸಲು ಮರಗಳನ್ನು ಬಳಕೆ ಮಾಡುತ್ತಾರೆ. ಇದು ಪರಿಸರ ನಾಶಕ್ಕೆ ದಾರಿಯಾಗಿದೆ. ಎಲ್ಲರೂ ಕಂಡಂತೆ ಮರಗಳು ನಮಗೆ ನೆರಳು ನೀಡುತ್ತವೆ ಹಾಗೂ ವಾತಾವರಣಕ್ಕೆ ತಂಪು ನೀಡುತ್ತವೆ ಅಲ್ಲದೆ ಮಳೆ ನೀರನ್ನು ಹಿಡಿದಿಡುತ್ತವೆ. ಪರಿಸರಕ್ಕೆ ಪೂರಕವಾಗಿವೆ. ಆದ್ದರಿಂದ ಮರಗಳನ್ನು ಉಳಿಸಿರಬೇಕೆಂದರೆ ಪೇಪರ್ ಉಳಿಸುವುದರ ಬಗ್ಗೆ ಗಮನಹರಿಸಬೇಕು. ನಾವು ಕೇವಲ ಒಂದೆರಡು ಬದಲಾವಣೆಯ ಧೈರ್ಯದ ಹೆಜ್ಜೆಯನ್ನು ಇರಿಸಿದರೆ ಮರಗಳ ನಾಶವನ್ನು ತಪ್ಪಿಸಬಹುದು. ಅವು ಹೀಗಿವೆ,

ಎಲ್ಲರೂ ಮದುವೆ ಆಹ್ವಾನ ಪತ್ರಿಕೆಯನ್ನು ಗಮನಿಸಿರುತ್ತೀರಿ. ಮೇಲಿನ ಕವರ್ ಬಿಟ್ಟು ಒಳಗೆ  8 ಪುಟ ಇರುತ್ತವೆ. ಮೊದಲನೇ ಪುಟದಲ್ಲಿ ಅವರವರ ದೇವರ ಚಿತ್ರ ಇರುತ್ತದೆ ಅಥವಾ ವಿವಾಹ ಆಹ್ವಾನ ಪತ್ರಿಕೆ ಅಂತ ಇರುತ್ತದೆ. ನಂತರ ಎರಡು ಮತ್ತು ಮೂರನೆಯದು ಖಾಲಿ ಇರುತ್ತದೆ. ನಾಲ್ಕು ಮತ್ತು ಐದರಲ್ಲಿ ಮಾತ್ರ ವಿಷಯ ಇರುತ್ತದೆ. ನಂತರ 6, 7, 8 ಎಲ್ಲಾ ಖಾಲಿ ಇರುತ್ತವೆ. ಎಷ್ಟು ವೇಸ್ಟ್ ಅಲ್ವಾ? ಇದರ ಬದಲಿಗೆ ಎರಡು ಪುಟ ಹಿಂದೆ ಮುಂದೆ ಅಥವಾ ನಾಲ್ಕು ಪುಟ ಮಾಡಿಸಿದರೆ ಬೇಕಾದಷ್ಟಾಯಿತು. ಮತ್ತೆ ಕೆಲವರು ಇಂಗ್ಲೀಷ್‌ನ ಒಮ್ಮೆ ಕನ್ನಡದಲ್ಲಿ ಒಮ್ಮೆ ಸಪರೇಟ್ ಸಪರೇಟ್ ಹಾಳೆ ಇಟ್ಟು ಬಾಕ್ಸ್ ಟೈಪ್ ಮಾಡಿಸಿ ಆಹ್ವಾನ ಪತ್ರಿಕೆಗಳಿಗೆ ತುಂಬಾ ಖರ್ಚು ಮಾಡುತ್ತಾರೆ. ಪೋಸ್ಟ್ ಮಾಡುವುದು ಕಡಿಮೆ ಆದ್ದರಿಂದ ಮೇಲಿನ ಕವರ್ ಅವಶ್ಯಕತೆಯೂ ಇರುವುದಿಲ್ಲ. 

ಹಾಗೆಯೇ ಮದುವೆ, ನಾಮಕರಣ, ಗೃಹ ಪ್ರವೇಶ, ಹುಟ್ಟಿದ ಹಬ್ಬ ಇತ್ಯಾದಿ ಕಾರ್ಯಕ್ರಮಗಳಿಗೆ ಕವರ್ ನಲ್ಲಿ ದುಡ್ಡು ಹಾಕಿ ಕೊಡುವುದು ಸಾಮಾನ್ಯ. ಕವರ್ ಗಳನ್ನು ಮತ್ತೆ ದುಡ್ಡು ಕೊಟ್ಟು ಕೊಂಡುಕೊಳ್ಳುವುದಕ್ಕಿಂತ ಹಳೆಯ ಆಹ್ವಾನ ಪತ್ರಿಕೆಗಳಿಂದ ಕವರ್ ಮಾಡುವುದು ನಾವು ಪರಿಸರಕ್ಕೆ ನೀಡುವ ಇನ್ನೊಂದು ಕೊಡುಗೆಯಾಗಿದೆ. ಕವರ್ ತಯಾರಿಸಲು ಮರಗಳನ್ನು ಕಡಿಯುವುದು ಉಳಿಯುತ್ತದೆ. ಹಳೆಯ ಆಹ್ವಾನ ಪತ್ರಿಕೆಗಳಿಂದ ಉಪಯೋ ಗವೂ ಆಗುತ್ತದೆ. ಕೇವಲ ಎರಡು ನಿಮಿಷದಲ್ಲಿ ಕವರ್ ತಯಾರಿಸಬಹುದು. 

ದಯವಿಟ್ಟು ಈ ಎರಡೂ ವಿಷಯಗಳನ್ನು ಗಮನಿಸಿ,  ಸಾಧ್ಯವಾದಲ್ಲಿ ನಾವು ಬದಲಾವಣೆಯನ್ನು ತರೋಣ. ಪರಿಸರ ರಕ್ಷಣೆಯಲ್ಲಿ ನಮ್ಮದೊಂದು ಕಿರು ಪಾತ್ರವಿರಲಿ. 

– ಮಮತಾ ನಾಗರಾಜ್, ದಾವಣಗೆರೆ.

error: Content is protected !!