ಹೆಲ್ಮೆಟ್‌ಗಿಂತ ಆರೋಗ್ಯಪೂರ್ಣ ಆಹಾರದತ್ತ ಗಮಹರಿಸಿ

ಮಾನ್ಯರೇ,

ಇದು ಬೇಸಿಗೆಯ ಸಮಯ ಈಗಾಗಲೇ ತಾಪಮಾನ ಹೆಚ್ಚಿದ್ದು, ಮಧ್ಯಾಹ್ನದ ಸಮಯ ಹೊರಗೆ ಹೋಗುವುದು ಬಹಳ ಕಷ್ಟ. ಕಛೇರಿಯಲ್ಲಿ ಕಾರ್ಯನಿರ್ವಹಿಸುವವರು ಹಾಗೂ ಕೆಲಸ ಕಾರ್ಯಗಳನ್ನು ಮಾಡುವವರಿಗೆ ಮಧ್ಯಾಹ್ನದ ಹೊತ್ತು ಊಟಕ್ಕೆ ಹೋಗುವುದು ಸಹ ಬಹಳ ಕಷ್ಟಕರವಾಗಿದೆ. ಇಷ್ಟಲ್ಲದೇ ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ದ್ವಿಚಕ್ರ ವಾಹನ ಸವಾರರು, ಕಡ್ಡಾಯವಾಗಿ ಫುಲ್ ಹೆಲ್ಮೆಟ್ ಧರಿಸಬೇಕೆಂದು ಆದೇಶ ಹೊರಡಿಸಿದ್ದು, ತಪ್ಪಿದ್ದಲ್ಲಿ ಸವಾರರು ದಂಡ ಪಾವತಿಸಬೇಕಾಗಿರುವ ಪರಿಸ್ಥಿತಿ ಎದುರಾಗಿದೆ. 

ಹೆಲ್ಮೆಟ್ ಧರಿಸುವುದು ರಕ್ಷಣೆಗಾಗಿ ಎಂಬುದು ಎಷ್ಟು ಸತ್ಯವೋ ಅದೇ ರೀತಿಯಾಗಿ ನೋಡಿದರೆ ಹೆಲ್ಮೆಟ್ ಧರಿಸದೇ ಅಪಘಾತದಲ್ಲಿ ಸಾವಿಗೀಡಾದವರ ಅಂಕಿ-ಅಂಶಗಳನ್ನು ನೋಡುವುದಾದರೆ ಬೆರಳೆಣಿಕೆಯಷ್ಟು ಸಂಖ್ಯೆ ಮಾತ್ರ. ಅಲ್ಲದೇ ರಸ್ತೆ ಸರಿಯಾಗಿಲ್ಲದೇ ಅಥವಾ ರಸ್ತೆಯಲ್ಲಿರುವ ಅಪಾಯಕಾರಿ ತಗ್ಗು ಗುಂಡಿಗಳಿಂದ ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆಯೇ ಹೆಚ್ಚು. ವಾಹನ ಸವಾರರ ಬೇಜವಾಬ್ದಾರಿ ಸವಾರಿಯಿಂದ ಆದ ಅಪಘಾತಗಳಿಂದ ಸಾವುಗಳಾಗಿ ವೇಯೇ ಹೊರತು ಹೆಲ್ಮೆಟ್ ಧರಿಸದಿದ್ದಕ್ಕೆ ಸಾವಾಗಿರುವುದು ಕಡಿಮೆ. 

ದಾವಣಗೆರೆ ನಗರವು ಅಷ್ಟೇನೂ ದೊಡ್ಡದ್ದಲ್ಲ. ಇಲ್ಲಿ ಎಲ್ಲರೂ ಸಹ ನಿಧಾನವಾಗಿಯೇ ವಾಹನ ಚಾಲನೆ ಮಾಡುತ್ತಾರೆ. ಅಪಘಾತವಾಗುವ ಸಂಭವವೂ ಸಹ ಕಡಿಮೆ. ಅಲ್ಲದೇ, ಹೆಲ್ಮೆಟ್‌ನಿಂದ ರಕ್ಷಣೆ ಸಿಗುತ್ತದೆ ಎಂಬುದೊಂದೇ ಮಾತ್ರವಲ್ಲ ಅದರಿಂದ ಅನಾನುಕೂಲಗಳು ಸಹ ಇವೆ. 

* ಹೆಲ್ಮೆಟ್‌ ಧರಿಸುವುದರಿಂದ ತಲೆಗೆ ಉಷ್ಣ ಹೆಚ್ಚಲಿದ್ದು ಚರ್ಮ ಕಾಯಿಲೆ ಬರಬಹುದು. * ಹೆಲ್ಮೆಟ್‌ ಭಾರವು ಹೆಚ್ಚಿರುವುದರಿಂದ ಮಿದು ಳಿಗೆ ಸಹ ಒಳ್ಳೆಯದಲ್ಲ. * ಉಸಿರಾಟದ ತೊಂ ದರೆ ಇದ್ದವರಿಗೆ ಹೆಲ್ಮೆಟ್‌ ಧರಿಸಿದಾಗ ಉಸಿರಾ ಡಲು ಕಷ್ಟಕರವಾಗಬಹುದು. * ಕೂದಲು ಉದುರುವ ಸಮಸ್ಯೆಯೂ ಬರಬಹುದು. 

ಪೊಲೀಸ್ ಇಲಾಖೆಗೇನೂ ಸಂಬಂಧ ನಿಯಮ ಉಲ್ಲಂಘನೆಯಾದರೆ ದಂಡ ಹಾಕಿದರೆ ಮುಗಿದುಹೋಯಿತು ಅಷ್ಟೇ, ಒಬ್ಬ ಮನುಷ್ಯ ಕಷ್ಟಪಟ್ಟು ದುಡಿದ ಹಣವನ್ನು ದಂಡ ಪಾವತಿಸಬೇಕೆಂದರೆ ಅದು ಅವನಿಗೆ ಕಷ್ಟವೇ ಸರಿ. ದಂಡ ಕಟ್ಟಬೇಕಾಗುತ್ತದೆ ಎಂಬ ಭಯದಿಂದ ಸವಾರರು ಕಷ್ಟ ಅನಿಸಿದರೂ ಸಹ ಹೆಲ್ಮೆಟ್‌ ಧರಿಸುತ್ತಿದ್ದಾರೆ. 

ಹಾಗೇ ನೋಡಿದರೆ, ಬಹಳಷ್ಟು ಜನ ಸಾಯುತ್ತಿರುವುದು ಅಪಘಾತದಿಂದಲ್ಲ, ಕಲಬೆರೆಕೆಯುಕ್ತ ಆಹಾರಗಳಿಂದ, ರಾಸಾಯನಿಕಯುಕ್ತ ಹಣ್ಣು ಹಾಗೂ ತರಕಾರಿಗಳಿಂದ ಹಾಗೂ ಮೆಡಿಕಲ್ ಮಾಫಿಯಾದಿಂದ. ಇವುಗಳಿಂದ ಮನುಷ್ಯ ಕ್ಯಾನ್ಸರ್ ಹಾಗೂ ಇತರೆ ಮಾರಣಾಂತಿಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾನೆ. ಆದ್ದರಿಂದ ಇಲಾಖೆಯು ಇವುಗಳ ಬಗ್ಗೆ ಹೆಚ್ಚು ಗಮನಹರಿಸಬೇಕಾದ ಅವಶ್ಯಕತೆ ಇದೆಯೇ ಹೊರತು ಈ ರೀತಿಯಾದ ನಿಯಮಗಳನ್ನು ಜಾರಿ ಮಾಡುವುದಲ್ಲ. ಈಗಲಾದರೂ ಪೊಲೀಸ್ ಇಲಾಖೆಯು ಎಚ್ಚೆತ್ತುಕೊಂಡು ಹೆಲ್ಮೆಟ್‌ ಕಡ್ಡಾಯ ಮಾಡಿರುವ ನಿಯಮವನ್ನು ಹಿಂಪಡೆದು ಉಳಿದ ಹಲವಾರು ಸಮಸ್ಯೆಗಳ ಬಗ್ಗೆ ಗಮನಹರಿಸುವುದು ಸೂಕ್ತ.

– ಶೃತಿ ಕೆ.ಇ. ದಾವಣಗೆರೆ.

error: Content is protected !!