ಮಾನ್ಯರೇ,
ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲೊಂದಾದ ಶ್ರೀ ಗುರು ಬಸವೇಶ್ವರರ ರಥೋತ್ಸವಕ್ಕೆ ಪಾದಯಾತ್ರೆಯ ಮೂಲಕ ಕೊಟ್ಟೂರು ಪಟ್ಟಣವನ್ನು ಪ್ರವೇಶಿಸುತ್ತಿದ್ದಂತೆ, ಕೊಂಚ ಗಲಿಬಿಲಿಗೊಂಡಿದ್ದಂತೂ ನಿಜ. ಯಾಕೆಂದರೆ, ಅಲ್ಲಿ ಜಾತ್ರೆಗೆ ಬರುವಂತಹ ಭಕ್ತಾದಿಗಳಿಗೆ ಶುಭಾಶಯ ಕೋರುವಂತಹ ಯಾವುದೇ ರೀತಿಯ ಫ್ಲೆಕ್ಸ್ ಗಳು ಕಾಣಲಿಲ್ಲ.!
ಈ ಬೆಳವಣಿಗೆಯಿಂದ ಸಹಜವಾಗಿಯೇ ನನಗೆ ಖುಷಿ ಎನಿಸಿತು. ನಾ ಕಂಡಂತೆ ಪ್ರತಿ ವರ್ಷವೂ, ರಸ್ತೆಯ ಬದಿಗಳಲ್ಲಿ ಶಾಸಕರು, ಸಂಸದರು, ಸಮಾಜ ಸೇವಕರು, ರಾಜಕೀಯ ಮುಖಂಡರು ಮತ್ತು ಪ್ರಚಾರ ಪ್ರಿಯರ ಪ್ಲೆಕ್ಸ್ಗಳೇ ಎಲ್ಲೆಡೆ ರಾರಾಜಿಸುತ್ತಿದ್ದವು. ಪ್ಲೆಕ್ಸ್ ಗಳ ಹಾವಳಿಯಿಂದಾಗಿ ಸಹಜವಾಗಿಯೇ ಜಾತ್ರೆಯ ಪ್ರಕೃತಿ-ಸೌಂದರ್ಯದ ಸೊಬಗಿಗೆ ಕಿರಿಕಿರಿ ಎನಿಸುತ್ತಿತ್ತು. ಮಿತಿಮೀರಿದ ಪ್ಲೆಕ್ಸ್ಗಳ ಹಾವಳಿಯಿಂದಾಗಿ, ಪರಿಸರಕ್ಕೂ ಧಕ್ಕೆಯಾಗುತ್ತಿತ್ತು. ಆದರೆ ಈ ಬಾರಿಯಿಂದ ಫ್ಲೆಕ್ಸ್ ಗಳ ಹಾವಳಿಗೆ ಕಡಿವಾಣ ಹಾಕಿರುವುದು ನಿಜಕ್ಕೂ ಸಂತೋಷದಾಯಕ ವಿಷಯ.
– ಮುರುಗೇಶ ಡಿ, ದಾವಣಗೆರೆ.