ಕಸ ಶೇಖರಣೆ ಮಾಡುವ ವಾಹನಗಳಲ್ಲಿ ಶರಣರ ವಚನ ಪ್ರಚಾರ ಮಾಡಿ

ಮಾನ್ಯರೇ,

ಶ್ರಮಿಕ ವರ್ಗದಲ್ಲಿ ಹುಟ್ಟಿದ ಎಲ್ಲಾ ಜಾತಿಯ ಶರಣರು ತಮ್ಮ ಅನುಭಾವದ ಮೂಲಕ ಮೌಢ್ಯ ಆಚರಣೆಗಳ ವಿರುದ್ಧ ಜಾಗೃತಿ ಮೂಡಿಸಿದ ವಚನಗಳು ಜನಗಳನ್ನ ವೈಜ್ಞಾನಿಕ, ವೈಚಾರಿಕ ಚಿಂತನೆಗೆ ಹಚ್ಚಬಲ್ಲವು ಎಂದುಕೊಂಡಿದ್ದೇನೆ. ಹಾಗಾಗಿ ಪೌರ ಆಡಳಿತದ ಸಚಿವರು, ಪಂಚಾಯತ್, ಪುರಸಭೆ, ನಗರಸಭೆ, ಪಾಲಿಕೆಗಳ, ಸದಸ್ಯರು ಅಧಿಕಾರಿಗಳು ಮತ್ತು ನೌಕರರಲ್ಲಿ ನನ್ನ ಕೋರಿಕೆ ಏನೆಂದರೆ ತಮ್ಮಗಳ ಆಡಳಿತದ ಅವಧಿ ಐತಿಹಾಸಿಕವಾಗಿ ಉಳಿಯಲು ನನ್ನದೊಂದು ಸಲಹೆ ಏನೆಂದರೆ ಬೆಳಿಗ್ಗೆ ಕಸ ಶೇಖರಣೆ ಮಾಡುವ ವಾಹನಗಳಲ್ಲಿ ಸಿನೆಮಾ ಗೀತೆ, ಭಕ್ತಿ ಗೀತೆ ಮತ್ತು ಭಾವ ಗೀತೆಗಳ ಜೊತೆ ಜನತೆಗೆ ಶರಣರ ವಚನಗಳನ್ನು  ಕೇಳಿಸಿ ಜಾಗೃತಿ ಮೂಡಿಸಲು ಮನವಿ.

– ಕೊಟ್ರೇಶ್ ಪಿ ಐರಣಿ, ದಾವಣಗೆರೆ. 9141305832.

error: Content is protected !!