ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ತಾತ್ಕಾಲಿಕ ಸಿಸಿ ಕ್ಯಾಮೆರಾ ಅಳವಡಿಸಿ..!

ಮಾನ್ಯರೇ,

ನಗರದ ಸ್ವಚ್ಛತೆಗಾಗಿ ದೊಡ್ಡ ಮಟ್ಟದಲ್ಲಿ ಪೌರ ಕಾರ್ಮಿಕ ಸಿಬ್ಬಂದಿ ನಿತ್ಯವೂ ಶ್ರಮಿಸುತ್ತಿದ್ದಾರೆ. ನಗರದ ದಶಕದ ಹಿಂದಿನ ದಿನಗಳನ್ನು ಕಂಡಿದ್ದವರಿಗೆ ಇಂದು ದಾವಣಗೆರೆ ನಗರ ಮಾದರಿ ನಗರವಾಗಿ ರೂಪುಗೊಳ್ಳಲು ಹೆಜ್ಜೆ ಇಡುತ್ತಿದೆ ಎಂಬುದು ಅರ್ಥವಾಗುತ್ತದೆ.

ಪ್ರತಿ ದಿನ ಮನೆ, ಹೋಟೆಲ್‌ ಹಾಗೂ ಅಂಗಡಿ ಮುಂಗಟ್ಟುಗಳಿಂದ ಉತ್ಪತ್ತಿಗೊಳ್ಳುವ ಕಸವನ್ನು ಕ್ರಮ ಬದ್ಧವಾಗಿ ಸ್ವೀಕರಿಸಿ, ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಈ ತರಹ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ದಾವಣಗೆರೆ ಜನತೆ ಅಭಿನಂದಿಸಲೇ ಬೇಕು.

ಪಾಲಿಕೆಯು ಕಸ ವಿಲೇವಾರಿ ಮಾಡಲು ಅಚ್ಚುಕಟ್ಟಾಗಿ ವ್ಯವಸ್ಥೆ ರೂಪಿಸಿದ್ದರೂ ನಗರದಲ್ಲಿನ ಕೆಲವರು ಇನ್ನೂ ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಿರುವುದು ಸರಿಯಲ್ಲ.

ಎಲ್ಲೆಂದರಲ್ಲಿ ಅಕ್ರಮವಾಗಿ ಕಸ ಎಸೆಯುವುದನ್ನು ತಡೆಯಲು ಪಾಲಿಕೆಯ ಅಧಿಕಾರಿಗಳು ಕೂಡಲೇ ತಾತ್ಕಾಲಿಕ ಸಿ.ಸಿ ಕ್ಯಾಮೆರಾ ಮತ್ತು ಡ್ರೋನ್ ಕ್ಯಾಮೆರಾ ಮೂಲಕ ಅಂತಹವರನ್ನು ಸೆರೆಹಿಡಿದು ದಂಡ ಹಾಕಲು ಮುಂದಾಗಬೇಕು.

– ವೈ. ವಾದಿರಾಜ ಭಟ್, ವಕೀಲರು, ದಾವಣಗೆರೆ.

error: Content is protected !!