ಖಾಲಿ ನಿವೇಶನ ಸ್ವಚ್ಛಗೊಳಿಸಿ, ಬೀದಿ ದೀಪ ಸರಿಪಡಿಸಿ..!

ಮಾನ್ಯರೇ,

ಇಲ್ಲಿನ ಸರಸ್ವತಿ ನಗರದ `ಎ ಬ್ಲಾಕ್‌, 3ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆಯಲ್ಲಿನ ಖಾಲಿ ನಿವೇಶನದಲ್ಲಿ ಕಸ-ಕಡ್ಡಿ ತುಂಬಿಕೊಂಡಿರುವುದರಿಂದ ಅಲ್ಲಿ ಹುಳ-ಹುಪ್ಪಡಿಗಳ ಕಾಟ ಹೆಚ್ಚಾಗಿದೆ.

ಇಲ್ಲಿನ ಒಂದು ಕಂಬದಲ್ಲಿ ಬೀದಿ ದೀಪ ಹಾಳಾಗಿದ್ದು, ರಾತ್ರಿಯಾದರೆ ಸಾಕು ಹಾವು-ಚೇಳುಗಳ ಭಯ ಕಾಡುತ್ತಿದೆ. ಮಕ್ಕಳು, ವೃದ್ಧರು ರಾತ್ರಿ ವೇಳೆ ಹೊರಗೆ ಬರಲು ಹೆದರುವ ಪ್ರಸಂಗ ಎದುರಾಗಿದೆ.

ಈ ಹಿಂದೆ ಒಮ್ಮೆ ಸಂಬಂಧಿಸಿದ ಇಲಾಖೆಗೆ ಈ ಬಗ್ಗೆ ದೂರು ನೀಡಿದ್ದರೂ ಸಹ ಅವರು ಮೌನದಿಂದಿದ್ದಾರೆ. ಅಧಿಕಾರಿಗಳು ಈ ಧೋರಣೆ ತೊರೆದು, ಕೂಡಲೇ ಇಲ್ಲಿನ ನಿವೇಶನ ಸ್ವಚ್ಛಗೊಳಿಸುವ ಜೊತೆಗೆ ಬೀದಿ ದೀಪ ದುರಸ್ತಿಗೊಳಿಸಬೇಕು.

– ಡಾ.ಎನ್‌.ಪಿ ಸುರೇಂದ್ರನಾಥ್‌,  ಸ್ಥಳೀಯ ನಿವಾಸಿ

– ವೈ. ವಾದಿರಾಜ್‌ ಭಟ್‌., ವಕೀಲರು, ದಾವಣಗೆರೆ

error: Content is protected !!