ಪಾದಚಾರಿ ರಸ್ತೆ ದುರಸ್ತಿಗೊಳಿಸಿ..!

ಪಾದಚಾರಿ ರಸ್ತೆ ದುರಸ್ತಿಗೊಳಿಸಿ..!

ಮಾನ್ಯರೇ,

ನಗರದ ಬಿಐಇಟಿ ರಸ್ತೆಯ ಹಳೇ ಆರ್‌.ಟಿ.ಓ ಬಳಿ ಇರುವ ಪಾದಚಾರಿ ರಸ್ತೆಯ ಕಾಮಗಾರಿ ಸ್ಥಗಿತಗೊಂಡಿ ದ್ದರಿಂದ ಅಲ್ಲಿನ ಜಲ್ಲಿಕಲ್ಲು, ಮರಳು ಗುಂಪಿ ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ.

ಆಂಜನೇಯ ಬಡಾವಣೆ, ಸಿದ್ದವೀರಪ್ಪ ಬಡಾವಣೆ, ಕುವೆಂಪು ನಗರ ಮತ್ತು ಬಿ.ಐ.ಇ.ಟಿ ಕಾಲೇಜಿಗೆ ಹೋಗುವ ಪ್ರಮುಖ ರಸ್ತೆ ಇದಾಗಿದ್ದು, ಮೊನ್ನೆ ಇಲ್ಲಿನ ಮೆಡ್‌ ಪ್ಲಸ್‌ ಔಷಧಿ ಅಂಗಡಿಗೆ ಬಂದಿದ್ದ ಹಿರಿಯ ನಾಗರಿಕರೊಬ್ಬರು ಔಷಧಿ ಕೊಂಡು ಅಲ್ಲಿನ ಜಲ್ಲಿ-ಕಲ್ಲಿನ ಮೇಲೆ ಸಾಗುವಾಗ ಆಯ ತಪ್ಪಿ ಬಿದ್ದಿದ್ದರಿಂದ ಗಾಯಗೊಂಡಿದ್ದರು.

ಇಂತಹ ಅವಘಡಗಳು ನಿತ್ಯವೂ ಸಂಭವಿಸುತ್ತಿದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಪಾದಚಾರಿ ರಸ್ತೆ ದರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಬೇಕು. 

– ರಘುನಾಥರಾವ್ ತಾಪ್ಸೆ,  ನಿವೃತ್ತ ಬ್ಯಾಂಕ್ ಅಧಿಕಾರಿ, ದಾವಣಗೆರೆ.

error: Content is protected !!