ಮಾನ್ಯರೇ,
ರಾಜ್ಯದಲ್ಲಿ ಕೆಲವು ವರ್ತಕರು ಗ್ರಾಹಕರಿಗೆ ಅನ್ಯ ಭಾಷೆಯಲ್ಲಿ ಬಿಲ್‌ಗಳನ್ನು ಕೊಡುವ ಮೂಲಕ ವ್ಯವಹಾರ ಮಾಡುತ್ತಿರುವುದನ್ನು ನಿಯಂತ್ರಿಸುವ ಮೂಲಕ ಕನ್ನಡ ಭಾಷೆಯಲ್ಲಿ ವ್ಯವಹಾರ ಮಾಡುವಂತೆ ಎಚ್ಚರಿಸಬೇಕಿದೆ.
ಹೊರ ರಾಜ್ಯದಿಂದ ಇಲ್ಲಿಗೆ ಬಂದು ಅವರ ಭಾಷೆಯಲ್ಲಿಯೇ ವ್ಯವಹಾರ ಮಾಡುತ್ತಿರುವುದರಿಂದ ಅವರು ಮಾಡುವ ಮೋಸ ಇಲ್ಲಿನ ಕನ್ನಡಿಗರಿಗೆ ಅರ್ಥವಾಗುವುದಿಲ್ಲ. ಹಾಗಾಗಿ ಕನ್ನಡ ಭಾಷೆಯಲ್ಲೇ ಬಿಲ್ ನೀಡುವ ಮೂಲಕ ವ್ಯವಹರಿಸುವುದು ಕನ್ನಡಿಗರ ಒತ್ತಾಯವಾಗಿದೆ.
ಕನ್ನಡ ಪರ ಹೋರಾಟಗಾರರು ಈ ಬಗ್ಗೆ ಗಮನ ಹರಿಸಿದರೆ ಕನ್ನಡಿಗರು ಮೋಸದ ಬಲೆಯಿಂದ ತಪ್ಪಿಸಿಕೊಳ್ಳಬಹುದು.
– ಕೊಟ್ರೇಶ್ ಪಿ. ಐರಣಿ