ಟ್ರಾಫಿಕ್‌ ಸಮಸ್ಯೆ ಪರಿಹರಿಸಿ..!

ಮಾನ್ಯರೇ,

ದಾವಣಗೆರೆ ನಗರದಲ್ಲಿ ದಿನ ಕಳೆದಂತೆ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಹಿರಿಯ ನಾಗರಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಚಿಕ್ಕ ಮಕ್ಕಳು ರಸ್ತೆಯಲ್ಲಿ ಸಂಚರಿಸಲು ಭಯದ ವಾತಾವರಣ ನಿರ್ಮಾಣವಾಗುತ್ತಿದೆ.

ವಾಹನಗಳ ಕರ್ಕಶ ಶಬ್ದ, ಕೆಲವು ವಾಹನಗಳು ಸೂಸುವ ಅಧಿಕ ಹೊಗೆ ಹಾಗೂ ರಸ್ತೆ ಅಪಘಾತಗಳು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ.

ಕಟ್ಟನಿಟ್ಟಿನ ಸಂಚಾರ ನಿಯಮ ಪಾಲನೆ ಮಾಡದಿರುವುದು ಹಾಗೂ ಅವಸರದಿಂದ ಗಾಡಿ ಓಡಿಸುವ ಚಾಲಕರಿಂದ ನಗರದಲ್ಲಿ ಒಂದಿಲ್ಲೊಂದು ಅಪಾಯ ಸಂಭವಿಸುತ್ತಲೇ ಇದೆ.

ಸರಿಯಾದ ಜಾಗದಲ್ಲಿ ಪಾರ್ಕಿಂಗ್‌ ಮಾಡದಿರುವುದು. ರಸ್ತೆಯಲ್ಲೇ ವಾಹನ ನಿಲ್ಲಿಸಿ ಮೊಬೈಲ್‌ ಬಳಕೆ ಮಾಡುತ್ತಿರುವವರಿಂದ ಇತರೆ ವಾಹನ ಸವಾರರಿಗೂ ತೊಂದರೆ ಆಗುವ ಜತೆಗೆ ಪಾದಚಾರಿಗಳಿಗೂ ತೀವ್ರತರ ಕಿರಿಕಿರಿ ಆಗುತ್ತಿದೆ.

ದಿನವೂ ಟ್ರಾಫಿಕ್ ಸಮಸ್ಯೆ ಉಲ್ಬಣವಾಗುತ್ತಿರುವುದರಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಹಾಗಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಮೌನ ವಹಿಸದೇ ಜನರ ಸಮಸ್ಯೆಗೆ ಸ್ಪಂದಿಸಬೇಕೆಂಬುದು ಎಲ್ಲರ ಧ್ವನಿಯಾಗಿದೆ.

ಜೆ. ಸೋಮನಾಥ್‌, ದಾವಣಗೆರೆ.

error: Content is protected !!