ಸೀಟ್ ಆಟೋಗಳು ಎಷ್ಟು ಸುರಕ್ಷಿತ?

ಸೀಟ್ ಆಟೋಗಳು ಎಷ್ಟು ಸುರಕ್ಷಿತ?

ಮಾನ್ಯರೇ, 

ದಾವಣಗೆರೆ ನಗರದಲ್ಲಿ ಒಂದಿಷ್ಟು ಸೀಟು ಆಟೋಗಳ ಸಂಖ್ಯೆ ಹೆಚ್ಚಿವೆ. ಆ ಆಟೋದಲ್ಲಿ ಗರಿಷ್ಠ ಎಷ್ಟು ಪ್ರಯಾಣಿಕರು ಇರಬಹುದು? ಎಂಬುದು ಹಲವರ ಪ್ರಶ್ನೆ ಆಗಿದೆ. ಎಡ ಬಲಕ್ಕೆ ತಿರುವು ತೆಗೆದುಕೊಳ್ಳುವ ಆಟೋ ಚಾಲಕರನ್ನು ಕಂಡಾಗ ಒಳಗೆ ಕುಳಿತಿರುವ ಪ್ರಯಾಣಿಕರು ಎಷ್ಟರ ಮಟ್ಟಿಗೆ ಸುರಕ್ಷಿತ? ಎಂಬ ಪ್ರಶ್ನೆಯೂ ಮೂಡುತ್ತದೆ.

ಎಲ್ಲರಿಗೂ ದುಡಿಮೆ ಮಾಡುವ, ಬದುಕುವ ಹಕ್ಕು ಇದೆ. ಆದರೆ ಸೀಟ್ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸುರಕ್ಷೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಏನು ಕ್ರಮವಹಿಸಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಭರ್ತಿಯಾಗಿರುವ ಸೀಟ್ ಆಟೋಗಳಲ್ಲಿ ಪ್ರಯಾಣಿಕರು ಹೊರ ಬೀಳದ ಹಾಗೇ ಸುರಕ್ಷಿತ ಬಾಗಿಲುಗಳು ಕಾಣಸಿಗುವುದಿಲ್ಲ. ಅನಾಹುತಗಳು ಆಗುವ ಮುಂಚೆಯೇ ಪ್ರಾದೇಶಿಕ ಸಾರಿಗೆ ಕಚೇರಿಯವರು ಈ ವಿಚಾರವಾಗಿ ಗಮನವಹಿಸಲಿ.

– ವೈ. ವಾದಿರಾಜ ಭಟ್, ವಕೀಲರು, ದಾವಣಗೆರೆ.

error: Content is protected !!