ಮಾನ್ಯರೇ
ದಾವಣಗೆರೆ ನಗರದ ಶ್ರೀ ಅಭಿನವ ರೇಣುಕ ಮಂದಿರ ಪಕ್ಕದಲ್ಲಿರುವ ಹಳೇ ಅಂಡರ್ ಬ್ರಿಡ್ಜ್ ರಸ್ತೆಯಲ್ಲಿ ಕಸದ ರಾಶಿಯೇ ಬಿದ್ದಿರುತ್ತದೆ. ರೇಣುಕ ಮಂದಿರದಲ್ಲಿ ಮದುವೆ ನಡೆದರೆ ಅಲ್ಲಿಯ ಯುಜಿಡಿ ತುಂಬಿ ರಸ್ತೆಗೆ ಹರಿಯುತ್ತದೆ. ಇದರಿಂದ ವಾಸನೆ ಹಾಗೂ ಓಡಾಡಲು ಸಹ ತೊಂದರೆಯಾಗಿದ್ದು, ಸೊಳ್ಳೆಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿರುತ್ತದೆ. ನಗರದ ಹೊಸ ಮತ್ತು ಹಳೆ ಊರಿನ ಕೊಂಡಿ ಯಂತಿರುವ ಈ ರಸ್ತೆಯಲ್ಲಿ ಪ್ರತಿದಿನ ಲಕ್ಷಾಂತರ ನಾಗರಿಕರು ಸಂಚಾರ ಮಾಡುತ್ತಾರೆ. ಹಾಗಾಗಿ ಈ ಬಗ್ಗೆ ಸಂಬಂಧಪಟ್ಟ ಪಾಲಿಕೆಯ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿ ಕೇಳಿಕೊಳ್ಳುತ್ತೇವೆ.
– ರವಿ ಎಸ್, ದಾವಣಗೆರೆ., ಬಿ. ಎಸ್. ರಾಘವೇಂದ್ರ ಶೆಟ್ಟಿ, ವಕೀಲರು.