ಮಾನ್ಯರೇ,
ಶಾಮನೂರು ಶಿವಪಾರ್ವತಿ ಬಡಾವಣೆ ವೇಗವಾಗಿ ಬೆಳೆಯುತ್ತಿದ್ದು, ಯಾವುದೇ ಅಭಿವೃದ್ಧಿ ಆಗಿರುವುದಿಲ್ಲ. ಪಾಲಿಕೆ ಆಯುಕ್ತರಿಗೆ ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಅಭಿವೃದ್ಧಿ ಕಂಡಿಲ್ಲ. ಜಲಸಿರಿ ನೀರು, ಬೀದಿ ದೀಪ. ರಸ್ತೆ ಸೇರಿದಂತೆ ಯಾವುದೇ ಕೆಲಸ ಮಾಡಲು ಸಾಧ್ಯವಾಗಿಲ್ಲ. ಇದಕ್ಕೆ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವಾಗಿದೆ.. ಆದ್ದರಿಂದ ಈ ಭಾಗದ ಶಾಸಕರಾದ ಮಾನ್ಯ ಮಂತ್ರಿಗಳು ಹಾಗೂ ಸಂಸದರು ಪಾಲಿಕೆ ಅಧಿಕಾರಿಗಳಿಗೆ ಹೇಳಿ ಆಗತ್ಯವಾದ ಮೂಲಭೂತ ಕೆಲಸಗಳನ್ನು ಮಾಡಿಸಬೇಕಾಗಿ ವಿನಂತಿ.
– ನೊಂದ ಬಡಾವಣೆ ನಾಗರಿಕರು