ಹದಡಿ ರಸ್ತೆ ವಿಭಜಕಗಳಿಗೆ ರಿಫ್ಲೆಕ್ಟರ್ ಅಳವಡಿಸಲು ಕೋರಿಕೆ

ಮಾನ್ಯರೇ,

ದಾವಣಗೆರೆ – ನಗರದ ಹದಡಿ ರಸ್ತೆ ಅತೀ ಹೆಚ್ಚು ವಾಹನಗಳು ಓಡಾಡುವ ರಸ್ತೆ. ಇಲ್ಲಿ ರಸ್ತೆ ವಿಭಜಕಗಳಿವೆ. ಆದರೆ ಕತ್ತಲಿನಲ್ಲಿ ರಸ್ತೆ ವಿಭಜಕಗಳು ಸರಿಯಾಗಿ ಕಾಣದೇ ಅಪಘಾತವಾಗುವ ಸಂಭವ ಹೆಚ್ಚು. ಹಾಗಾಗಿ ಈ ವಿಭಜಕಗಳಿಗೆ ರಿಫ್ಲೆಕ್ಟರ್‌ಗಳನ್ನು ಅಳವಡಿಸಬೇಕಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

– ಪದ್ಮಲತಾ , ದಾವಣಗೆರೆ.

error: Content is protected !!