ಮಾನ್ಯರೇ,
ನಗರದ ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್‌ನಲ್ಲಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಮುಂಭಾಗದಲ್ಲಿ ಇರುವ ಲೈಟಿನ ಕಂಬವು ಮೇಲ್ಭಾಗದಲ್ಲಿ ಮುರಿದಿದ್ದು, ಜೋರಾಗಿ ಗಾಳಿ ಬೀಸಿದರೆ ಯಾವ ಕ್ಷಣದಲ್ಲಾದರೂ ಬೀಳಬಹುದು. ಬಿದ್ದು ಇದರಿಂದಾಗುವ ಅನಾಹುತ ತಪ್ಪಿಸಲು ಕೂಡಲೇ ಬೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.
– ಕೆ.ಜಿ.ಬಸವರಾಜಪ್ಪ, ಹಿರಿಯ ನಾಗರಿಕರು, ದಾವಣಗೆರೆ.