ಮಾನ್ಯರೇ,
ದಾವಣಗೆರೆ ನಗರದ ವಿಜಯಲಕ್ಷ್ಮಿ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರಿಂದ ಪಾದಚಾರಿಗಳಿಗೆ, ವಾಹನ ಸಂಚಾರಿಗಳಿಗೆ ಮತ್ತು ವಾಹನ ನಿಲುಗಡೆಗೆ ಸಂಕಷ್ಟ ಎದುರಾಗಿದೆ.
ಈ ಭಾಗದಲ್ಲಿ ಅಂಗಡಿ ಮುಂಗಟ್ಟುಗಳ ಸಂಖ್ಯೆ ಅಧಿಕವಾಗಿದ್ದರಿಂದ ಜನ ದಟ್ಟಣೆ ಹೆಚ್ಚಾಗಿದ್ದು, ಹರ್ಡೇಕರ್ ಮಂಜಪ್ಪ ವೃತ್ತದಿಂದ ಕಾಳಿಕಾದೇವಿ ರಸ್ತೆಯ ವರೆಗೂ ತಳ್ಳುಗಾಡಿ ವ್ಯಾಪಾರಸ್ಥರು ರಸ್ತೆ ಆಕ್ರಮಿಸಿಕೊಂಡಿದ್ದಾರೆ.
ಮಾರುಕಟ್ಟೆಗೆ ಆಗಮಿಸುವ ಜನ ಟ್ರಾಫಿಕ್, ಹಾರ್ನ್ ಶಬ್ದ, ನೂಕು ನುಗ್ಗಲು ಹಾಗೂ ತಳ್ಳಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಮಹಾನಗರ ಪಾಲಿಕೆ, ಆರ್‌ಟಿಒ, ಸ್ಮಾರ್ಟ್ ಸಿಟಿ ಹಾಗೂ ಸಂಚಾರಿ ಪೊಲೀಸರು ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕಾಗಿ ವಿನಂತಿ.
– ಬಿ.ಎಸ್. ರಾಘವೇಂದ್ರ ಶೆಟ್ಟಿ., ವಕೀಲರು.