ಮಾನ್ಯರೇ,
ನಮ್ಮ ಭವ್ಯ ರಾಷ್ಟ್ರ ಭಾರತ ದೇಶದ ಸಹೋದರ ರಾಷ್ಟ್ರವಾದ ಬಾಂಗ್ಲಾದೇಶದಲ್ಲಿ ಕಳೆದ 1 ತಿಂಗಳಿಂದ ಅಮಾನುಷವಾಗಿ ಮಾನವ ಹತ್ಯೆ ನಡೆಯುತ್ತಿದ್ದು, ಅವುಗಳನ್ನು ಮೌನ ತುಂಬಿದ / ದುಃಖಿತ ಹೃದಯದಿಂದ ಸುದ್ಧಿ ಪ್ರಸಾರ ನೋಡುತ್ತಿದ್ದು, ತುಂಬಾ ಅಮಾನುಷವಾಗಿ ನಾಗರಿಕರನ್ನು ಕೊಲ್ಲಲಾಗುತ್ತಿದೆ. ಅದರ ಕಾರಣ, ಪರಿಣಾಮ ಏನೇ ಇದ್ದರೂ ಅಲ್ಲಿಯ ರಾಜಕೀಯ ವ್ಯವಸ್ಥೆ ಮತ್ತು ಸಾಮಾಜಿಕ ಪದ್ಧತಿ ಏನೇ ಇದ್ದರೂ, ರಾಷ್ಟ್ರದ ಸಂಪನ್ಮೂಲ ಮತ್ತು ಜಾಗತಿಕ, ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಹತ್ಯೆ ಆಗುತ್ತಿರುವುದು ಖಂಡನೀಯ. ಈ ರೀತಿಯ ಘಟನೆಗಳನ್ನು ಒಂದು ತಿಂಗಳಿನಿಂದ ಗಮನಿಸುತ್ತಿದ್ದು, ಸುದ್ಧಿ ಪ್ರಸಾರದಲ್ಲಿ ಇವುಗಳನ್ನು ತಾಜಾ ಸುದ್ಧಿಗಳೆಂದು ಬಿಂಬಿಸುತ್ತಿರುವುದು ನನ್ನ ಮನಸ್ಸಿಗೆ ತುಂಬಾ ಖೇದಕರ ಸಂಗತಿಯಾಗಿದೆ. ಆದಾಗ್ಯೂ ಅಂತರರಾಷ್ಟ್ರೀಯ ಸಂಸ್ಥೆಗಳಾದ ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳಂತಹ ಸಂರಕ್ಷಣಾ ಸಂಸ್ಥೆಗಳು ಏಕೆ ಮೌನ ವಹಿಸಿವೆ ಮತ್ತು ಏಕೆ ಮಧ್ಯ ಪ್ರವೇಶಿಸುತ್ತಿಲ್ಲ, ಮಾನವರ ರಕ್ಷಣೆ ಏಕೆ ಮಾಡುತ್ತಿಲ್ಲ, ಇವುಗಳ ಬಗ್ಗೆ ಇದುವರೆಗೂ ಜಗತ್ತಿನ ಶ್ರೇಷ್ಠ ಸಂಸ್ಥೆಗಳೆಂದು ಗುರುತಿಸಿಕೊಂಡಿರುವ ಸಂಸ್ಥೆಗಳು ಮೌನ ವಹಿಸಿರುವುದು ದುರದೃಷ್ಟಿಕರ ಸಂಗತಿ ಮತ್ತು ಮಾನವ ಸಂಕುಲಕ್ಕೆ ಕಳಂಕ ಬರುವ ರೀತಿಯಲ್ಲಿ ರಕ್ಷಣೆಗೆ ಬರದಿರುವುದು ನೋವಿನ ಸಗತಿಯಾಗಿದೆ.
ನಾವು ನಮ್ಮ ದೇಶದ ಸಹೋದರ ದೇಶದಲ್ಲಿ ನಮ್ಮ ಸಹೋದರರಿಗೆ ಆಗುತ್ತಿರುವ ತೊಂದರೆಯನ್ನು ಅರಿತು ಇತ್ತ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳು ಗಮನಹರಿಸಿ ವಿಶ್ವಸಂಸ್ಥೆ ಮಟ್ಟದಲ್ಲಿ ಇದರ ಬಗ್ಗೆ ಸುದೀರ್ಘ ಚರ್ಚೆ ಮತ್ತು ಪರಿಹಾರ, ರಕ್ಷಣಾ ಕಾರ್ಯಕ್ಕೆ ನೆರವಾಗಬೇಕಾಗಿದೆ. ನೈಸರ್ಗಿಕ ವಿಕೋಪಗಳು ಆದಂತಹ ಸಂದರ್ಭದಲ್ಲಿ ಸೇನಾ ನೆರವು ಮತ್ತು ಇನ್ನಿತರೆ ನೆರವುಗಳನ್ನು ನೀಡುವ ಸಂಸ್ಥೆಗಳು ಕುಚ್ಯೋದ್ಯ ವ್ಯಕ್ತಿಗಳು ಮಾಡುತ್ತಿರುವ ಇಂತಹ ಹಿಂಸಾತ್ಮಕ ಕೃತ್ಯಗಳ ಬಗ್ಗೆ ಏಕೆ ಮೌನ ?.
–ಆರ್. ಯೋಗೀಶ್ವರಪ್ಪ
ವಕೀಲರು