ಮಾನ್ಯರೇ,
ವಿನೋಬ ನಗರದ 1ನೇ ಮುಖ್ಯ ರಸ್ತೆ, 11ನೇ ಅಡ್ಡ ರಸ್ತೆಯಲ್ಲಿನ ಚರಂಡಿಯ ಮೇಲೆ ಹೊದಿಸಿದ ಕಲ್ಲುಗಳನ್ನು ಪಾಲಿಕೆಯವರು ತೆಗೆದು ರಸ್ತೆಗೆ ಹಾಕಿದ್ದು, 3-4 ತಿಂಗಳು ಕಳೆದರೂ ಅದನ್ನು ಸರಿಪಡಿಸಲು ಪಾಲಿಕೆ ಮುಂದಾಗಿಲ್ಲ.
ಇಂದಿಗೂ ರಸ್ತೆಯಲ್ಲೇ ಇರುವ ಕಲ್ಲುಗಳಿಂದ ಅನೇಕ ಅಪಘಾತಗಳು ಸಂಭವಿಸಿದ್ದು, ಈ ಬಗ್ಗೆ ಪಾಲಿಕೆ ಸಿಬ್ಬಂದಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದರೂ ನಾಗರಿಕರ ಮಾತು ಅವರ ಕಿವಿಗೆ ತಾಗುತ್ತಿಲ್ಲ. ಕೂಡಲೇ ಕಲ್ಲುಗಳನ್ನು ಚರಂಡಿ ಮೇಲೆ ಹಾಕಿಸಿ, ಸಂಚಾರಕ್ಕೆ ಅಡಚಣೆ ಆಗುತ್ತಿರುವುದನ್ನು ಸರಿಪಡಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕೆಂದು ಪಾಲಿಕೆ ಆಯುಕ್ತರಲ್ಲಿ ವಿನಂತಿ.
– ಎಚ್. ದಿವಾಕರ್, ವಕೀಲರು, ದಾವಣಗೆರೆ.