ಮಾನ್ಯರೇ,
ನಗರದ ಗುಂಡಿ ವೃತ್ತದಲ್ಲಿ ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘಿಸುತ್ತಿರುವುದಕ್ಕೆ ಸಂಚಾರಿ ಹಸಿರು ಸೂಚಕದ ಸಮಯವನ್ನು 15 ಸೆಕೆಂಡಿಗೆ ನಿಗದಿ ಪಡಿಸಿರುವುದೇ ಮುಖ್ಯ ಕಾರಣವಾಗಿದೆ.
ಕಡಿಮೆ ಸಮಯ ಕಲ್ಪಿಸಿರುವುದರಿಂದ ಅವಸರದ ವಾಹನ ಸವಾರರು ಸಿಗ್ನಲ್ ಜಂಪ್ ಮಾಡಿ ಸಂಚರಿಸುತ್ತಿರುವುದು ಅನಾಹುತಗಳಿಗೆ ಮತ್ತು ನಿಯಮ ಉಲ್ಲಂಘನೆಗೆ ಕಾರಣವಾಗುತ್ತಿದೆ. ಆದ್ದರಿಂದ 15 ಸೆಕೆಂಡ್ ಸಮಯವನ್ನು 30 ಸೆಕೆಂಡಿಗೆ ಹೆಚ್ಚಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದೇನೆ.
– ಡಾ.ಜಿ. ನಾಗರಾಜ್., ಎಂ.ಸಿ.ಸಿ. `ಬಿ’ ಬ್ಲಾಕ್ ದಾವಣಗೆರೆ