ಕಂದಾಯ ಕಟ್ಟೇವಿ, ರಸ್ತೆ ಸೌಲಭ್ಯ ಕೊಡಿ

ಕಂದಾಯ ಕಟ್ಟೇವಿ, ರಸ್ತೆ ಸೌಲಭ್ಯ ಕೊಡಿ

ಮಾನ್ಯರೇ,

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಾಲಾಜಿ ನಗರದ ರಸ್ತೆಗಳು ಅಧಿಕ ಮಳೆಯಿಂದಾಗಿ ಕೆಸರು ಗದ್ದೆಯ ಸ್ವರೂಪ ತಾಳಿವೆ. ತಪ್ಪದೇ ಕಂದಾಯ ಕಟ್ಟಿಸಿಕೊಳ್ಳುವ ಪಾಲಿಕೆಯು, ರಸ್ತೆ ಸೌಲಭ್ಯ ಕಲ್ಪಿಸಲು ಕಣ್ಮುಚ್ಚಿ ಕುಳಿತಿದೆ. ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಡಾವಣೆಯ ನಿವಾಸಿಗಳು ನಿತ್ಯವೂ ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಮಾಡಬೇಕಿದೆ ಮತ್ತು ವಿಶೇಷವಾಗಿ ಹಿರಿಯರು ಮತ್ತು ಮಹಿಳೆಯರು ರಸ್ತೆಯಲ್ಲಿ ಹೋಗುವುದಕ್ಕೆ ಸಂಕಟ ಪಡುವಂತಾಗಿದೆ.

ಸ್ಮಾರ್ಟ್‌ ಸಿಟಿ ಎಂದು ಕರೆಸಿಕೊಳ್ಳುವ ದಾವಣಗೆರೆಗೆ ಈ  ಬಾಲಾಜಿ ನಗರದಿಂದಲೇ ಕಪ್ಪು ಚುಕ್ಕೆ ಬರುವಂತಿದೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಮತ್ತು ವಾರ್ಡಿನ ಸದಸ್ಯರು ಈ ದುಸ್ಥಿತಿಯನ್ನು ಕೂಡಲೇ ಸರಿಪಡಿಸಬೇಕು.

– ಜಗದೀಶ್‌ ಮತ್ತು ಟಿ.ಎಚ್‌.ಎಂ. ವೀರೇಶ್‌., ಸ್ಥಳೀಯ ನಿವಾಸಿ.

error: Content is protected !!