ಹದಗೆಟ್ಟ ನೈರ್ಮಲ್ಯ : ದುರಸ್ತಿಗೆ ಆಗ್ರಹ

ಹದಗೆಟ್ಟ ನೈರ್ಮಲ್ಯ : ದುರಸ್ತಿಗೆ ಆಗ್ರಹ

ಮಾನ್ಯರೇ, 

ಪಿ.ಬಿ. ರಸ್ತೆಯ ಪೂಜಾ ಹೋಟೆಲ್ ಎದುರು, ಸೊಸೈಟಿ ಪೆಟ್ರೋಲ್ ಬಂಕ್ ಪಕ್ಕದಲ್ಲಿ ಇರುವ ಮಳಿಗೆಗಳ ಮುಂಭಾಗದ ಪಾರ್ಕಿಂಗ್‌ನಲ್ಲಿ ಮಳೆ ನೀರು ಹರಿಯದೇ ಕೆಸರು ಗದ್ದೆಯಂತಾಗಿದೆ. ಸುತ್ತಲೂ ಪಾಚಿಗಟ್ಟಿ, ಸೊಳ್ಳೆಕಾಟ ಹೆಚ್ಚಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೈರ್ಮಲ್ಯ ಹದಗೆಟ್ಟಿದೆ.ಸಂಬಂಧಪಟ್ಟ ಕಾರ್ಪೋರೇಷನ್ ಸದಸ್ಯರು ಅಥವಾ ಆಯುಕ್ತರು, ಸ್ಮಾರ್ಟ್ ಸಿಟಿ ಅಧಿಕಾರಿಗಳು ಗಮನ ಹರಿಸಬೇಕಾಗಿ ಮನವಿ. 

– ಟಿ.ಜಿ. ಸುರೇಶ್, ದಾವಣಗೆರೆ.

error: Content is protected !!