ಮಾನ್ಯರೇ,
ಇತ್ತೀಚಿನ ಫಯಾಜ್, ಪ್ರಜ್ವಲ್‌ರ ಸಮಾಜ ಕಂಟಕ ಪ್ರಮಾದಗಳು ಕರುನಾಡಿನ ಮಾನವೀಯತೆ ಅಂಶವುಳ್ಳ ಸರ್ವರೂ ತಲೆತಗ್ಗಿಸಬೇಕಾದ ಅಮಾನವೀಯ ಕೃತ್ಯ. ಮುಂದಾದರೂ ಇಂತಹ ಘಟನೆಗಳು ನಡೆಯದಿರಲು ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಆದ್ದರಿಂದ ಬುದ್ಧ ಅರುಹಿದ ಮಹಾ ರೋಗಗಳಾದ ಅಹಂಕಾರ, ಭ್ರಮೆಗಳು, ದುರಾಸೆ, ದ್ವೇಷ, ಹೊಟ್ಟೆಕಿಚ್ಚು ಇವುಗಳಿಂದ ಹೊರಬಂದರೆ, ಸ್ವತಃ ಆರೋಗ್ಯವಂತರಾಗಿ, ಆರೋಗ್ಯವಂತ ಸಮಾಜವನ್ನು ನಾವು ನಿರ್ಮಾಣ ಮಾಡಬಹುದು.
ಅಧಿಕಾರ, ಹಣ, ಹೆಣ್ಣು, ಕೀರ್ತಿಗಳ ಬೆನ್ನು ಹತ್ತಿ ಜೀವನ ದುರಂತ ಮಾಡಿಕೊಂಡವರ ಉದಾಹರಣೆಗಳು ಕೋಟಿ – ಕೋಟಿ ಇದ್ದರೂ ಮತ್ತೂ ನಾನು, ನನ್ನದು, ನಾನೇನಾದರೂ ದಕ್ಕಿಸಿಕೊಳ್ಳಬಲ್ಲೆ ಎಂಬ ಮಹಾರೋಗದಿಂದ ಮತ್ತಷ್ಟು ಜನ ಪ್ರಪಾತಕ್ಕೆ ಬೀಳುತ್ತಿರುವುದು ಶೋಚನೀಯ. ಇಂತಹ ದುರಂತಗಳಿಗೆ ಬುದ್ಧನೇ ನೀಡಿರುವ ದಿವ್ಯ ಔಷಧಗಳಾದ ಪ್ರೀತಿ, ಸಮಚಿತ್ತತೆ, ಏಕತೆ, ಎಚ್ಚರ, ವಿವೇಕದತ್ತ ಆಳವಾಗಿ ವಿವಿಧ ಮಜಲುಗಳಿಂದ ಆಲೋಚಿಸಿ, ಮಾನವೀಯ ಸಮಾಜವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
– ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ.