ಮಾನ್ಯರೇ,
ಬಿಸಿಲಿನ ತಾಪಮಾನವು ಕಲ್ಯಾಣ ಕರ್ನಾಟಕದಂತೆ ದಾವಣಗೆರೆ ಜಿಲ್ಲೆಯಲ್ಲೂ ಹೆಚ್ಚು ಕಡಿಮೆ 40 ಡಿಗ್ರಿ ವರೆಗೆ ಕಳೆದ ಒಂದು ತಿಂಗಳಿಂದಲೂ ಇರುತ್ತದೆ. ಇದರಿಂದ ಜನ ಕಂಗಾಲಾ ಗಿದ್ದಾರೆ.
ಅದರಲ್ಲೂ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದರಿಂದ ಅವರ ಕೂದಲು ಉದುರುವುದು ಮತ್ತು ಚರ್ಮ ಕಾಯಿಲೆಗೆ ತುತ್ತಾಗುವುದು ಕಂಡುಬರುತ್ತದೆ ಇದನ್ನು ಸ್ವಲ್ಪ ಮಟ್ಟಿಗಾದರೂ ತಪ್ಪಿಸಲು ಮುಂಗಾರು ಆರಂಭವಾಗುವವರೆಗೆ ಕಡ್ಡಾಯ ಹೆಲ್ಮೆಟ್ ಧರಿಸುವುದರಿಂದ ವಿನಾಯ್ತಿ ನೀಡಲು ಸಂಬಂಧಪಟ್ಟ ಇಲಾಖೆಯವರು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಲು ಕೋರಲಾಗಿದೆ.
– ಎಸ್. ಹಾಲೇಶಪ್ಪ, ನಿ.ಪೂ. ಜಿಲ್ಲಾಧ್ಯಕ್ಷ ಸ ನೌ ಸಂಘ, ದಾವಣಗೆರೆ.