ಮಾನ್ಯರೇ,
ಬಾನಾಡಿಗಳಿಗೆ ಬಾಯಾರಿದೆ…!
ಬೇಸಿಗೆ ಕಾಲ ಶುರು ವಾಗಿದೆ. ಮನುಷ್ಯರಾದ ನಮಗೆ ಈ ಸೆಕೆ, ಉರಿಬಿಸಿಲು, ಬಾಯಾರಿಕೆ ಇವೆಲ್ಲದರ ದಾಹ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಾಗಾದರೆ ಪ್ರಾಣಿ, ಪಕ್ಷಿಗಳ ಗತಿಯೇನು? ಒಮ್ಮೆ ಯೋಚಿಸಿ.
ಅದೆಷ್ಟೋ ಪಕ್ಷಿಗಳು ಬಿಸಿಲ ಬೇಗೆ ತಾಳಲಾರದೆ ಸಾಯುತ್ತಿವೆ. ಹಾಗಾಗಿ ನಿಮ್ಮ ಮನೆಯ ವರಾಂಡದಲ್ಲಿ, ಗಾರ್ಡನ್‌ನಲ್ಲಿ ಇಲ್ಲವೇ ಮನೆಯ ತಾರಸಿಯ ಮೇಲೆ ಒಂದು ಅಗಲ ಪಾತ್ರೆಯಲ್ಲಿ ನೀರು ತುಂಬಿಸಿಟ್ಟರೆ ಪಕ್ಷಿಗಳಿಗೆ ಅನುಕೂಲವಾಗುತ್ತವೆ. `ಬದುಕಿ- ಬದುಕಿಸಿ’
– ವಿಕಾಸ್ ಕೆ., ಅಡವಿಮಲ್ಲಿನಕೇರಿ, ಹೂವಿನಹಡಗಲಿ ತಾಲ್ಲೂಕು.