ಮುದ್ರಾಂಕ ಶುಲ್ಕ ಏರಿಕೆ ಅವೈಜ್ಞಾನಿಕ..!

ಮಾನ್ಯರೇ,

ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರ ಮುದ್ರಾಂಕ ಶುಲ್ಕವನ್ನು ಅವೈಜ್ಞಾನಿಕವಾಗಿ ಏರಿಸಿದ್ದು ಬೆಲೆ ಏರಿಕೆಯಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳು ಸೇರಿದಂತೆ, ಕೃಷಿ  ಉಪಕರಣಗಳಿಗೆ ಸಹಾಯಧನ, ಮುಚ್ಚಳಿಕೆ ಪತ್ರ, ಪ್ರಮಾಣ ಪತ್ರಗಳನ್ನು 20 ರೂ.ಗಳ ಅಫಿಡೆವಿಟ್‌ನಲ್ಲಿ ಸಲ್ಲಿಸಲಾಗುತ್ತಿತ್ತು. ಆದರೆ ಏಕಾಏಕಿ ಈ ದರವನ್ನು ಅವೈಜ್ಞಾನಿಕವಾಗಿ 5 ಪಟ್ಟು ಅಂದರೆ 100 ರೂಪಾಯಿಗೆ ಹೆಚ್ಚಳ ಮಾಡಿದ್ದು, ಕನಿಷ್ಠ ದರವೂ ಇದಾಗಿದೆ. ವಿವಿಧ ಬಗೆಯ ಯೋಜನೆಗಳಿಗೆ 20 ರೂ.ಗಳ ಪ್ರಮಾಣ ಪತ್ರ   ಸಾಕು. ಆದರೆ 100 ರೂಗಳ ಅವಶ್ಯಕತೆ ಇಲ್ಲದಿದ್ದರೂ ಕೂಡ ಬೆಲೆ ಏರಿಕೆಯ ಅನಿವಾರ್ಯತೆಯಿಂದಾಗಿ ತೆಗೆದುಕೊಳ್ಳಬೇಕಾಗಿದೆ. ಸಾಲ, ಆಸ್ತಿ ಖರೀದಿಯ ಪತ್ರಗಳ ಮೇಲೆ ಹೆಚ್ಚಳ ಮಾಡಲಿ, ಆದರೆ ರೈತಾಪಿ ಮತ್ತು ಮಧ್ಯಮ  ವರ್ಗದವರೇ ಹೆಚ್ಚಾಗಿ ಉಪಯೋಗಿಸುವಂತಹ ಅಫಿಡೆವಿಟ್ ದರವನ್ನು ಹಳೆಯ ದರಕ್ಕೆ ಇಳಿಸಲು ರಾಜ್ಯ ಸರ್ಕಾರ ಚಿಂತಿಸಬೇಕಾಗಿದೆ.


– ಮುರುಗೇಶ ಡಿ.  ದಾವಣಗೆರೆ.

error: Content is protected !!