ಮಾನ್ಯರೆ,
ಇಂದಿನ ನಮ್ಮ ಜೀವನ ಯಾಂತ್ರಿಕವಾಗಿದೆ, ನಮ್ಮ ನೈತಿಕ ಮೌಲ್ಯಗಳು ನಮ್ಮಿಂದ ದೂರವಾಗುತ್ತಿವೆ, (ಕುಸಿಯುತ್ತಿವೆ) ನಾವು ನಮ್ಮ ಬದುಕನ್ನು ಇಂದಿನ ನಮಗಾಗಿ ಕಾಯಬೇಕು ಮಾತ್ರವಲ್ಲ ನಾಳಿನ ನಮ್ಮ ಸಂತತಿಗಾಗಿ ಕಾಯುವುದಕ್ಕೂ ಬದ್ಧರು ಎಂಬ ಪ್ರಜ್ಞೆಯಿಂದ ವರ್ತಿಸಬೇಕಾಗಿದೆ.
ಇಂದಿನ ನಮ್ಮ ಸ್ಥಿತಿ, ಮನೋಧರ್ಮ, ನಡೆ-ನುಡಿ, ನಡವಳಿಕೆ ನಮ್ಮ ಪೂರ್ವಜರ ಭವ್ಯ ಬದುಕಿನ ಇತಿಹಾಸವನ್ನು, ಪರಂಪರೆಯನ್ನು ಮರೆತು ಬದುಕುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಗೆ ಅವರ ಭವಿಷ್ಯ ರೂಪಿಸಿಕೊಳ್ಳಲು ಸರಿಯಾದ ಮಾರ್ಗವನ್ನು ತೋರಿಸದೇ ಸ್ವಾರ್ಥದಿಂದ ಏನೆಲ್ಲವನ್ನು ಮರೆತು ಬದುಕುತ್ತಿದ್ದೇವೆ. ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ, ಪರಂಪರೆ, ನಮ್ಮ ಪೂರ್ವಜರು ಬದುಕಿದ ಜೀವನದ ಮೌಲ್ಯಗಳನ್ನು ತಿಳಿಸಿಕೊಡುತ್ತಿಲ್ಲ, ನಮ್ಮ ಮನೋಧರ್ಮ ಮನೋವಿಕಾರಗೊಳ್ಳುತ್ತಿದೆ. ನಾಳಿನ ಬದುಕಿಗೆ ನಮ್ಮ ಕನಸುಗಳು ಸಾಕಾರಗೊಳ್ಳದೇ ಔದಾಸೀನ್ಯವನ್ನು, ಅಂಧ ಶ್ರದ್ದೆಯನ್ನು ನಿರ್ಮಾಣ ಮಾಡುತ್ತಿವೆ. ನಾವಿಂದು ಎಚ್ಚರಗೊಳ್ಳದಿದ್ದರೆ ಮುಂದಿನ ಬದುಕು ? ಬಲು ಜೋಕೆ !
– ಜೆಂಬಿಗಿ ಮೃತ್ಯುಂಜಯ, ದಾವಣಗೆರೆ