ಮಾನ್ಯರೇ,
ದಾವಣಗೆರೆ ಅತೀ ವೇಗವಾಗಿ ಬೆಳೆಯುತ್ತಿರುವ ನಗರವೆಂದು ಹೆಸರು ಬಂದಿದೆ. ಸ್ಮಾರ್ಟ್ ಸಿಟಿ ಹೆಗ್ಗಳಿಕೆಗೂ ಪಾತ್ರವಾಗಿದೆ. ದೇಶದ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಇಲ್ಲಿ ಕಲಿಯಲು ಬರುತ್ತಾರೆ. ಆದರೆ, ಕತ್ತಲಾದೊಡನೆ ಇಲ್ಲಿನ ರಸ್ತೆಗಳು ಕುರುಡಾಗುತ್ತವೆ. ಹದಡಿ ರಸ್ತೆ, ಶಾಮನೂರು ರಸ್ತೆ, ಚಿಗಟೇರಿ ಆಸ್ಪತ್ರೆ ಎದುರು, ಮಿಣಿ ಮಿಣಿ ಎನ್ನುವ ಬೀದಿ ದೀಪದ ಬೆಳಕು ಏನೇನೂ ಸಾಲದು. ಯಾರ ಯೋಜನೆಯೋ ತಿಳಿಯದು ತೆಂಗಿನ ಮರಕ್ಕಿಂತ ದೊಡ್ಡ ಕಂಬಗಳ ತುದಿಯಲ್ಲಿ ಸಣ್ಣ ಎಲ್.ಇ.ಡಿ. ಬಲ್ಬ್‌ಗಳಿವೆ. ಹಾಗಾಗಿ ದಾವಣಗೆರೆ ಕತ್ತಲೆ ಕೂಪದಲ್ಲಿದ್ದು, ಜನರು ಕಷ್ಟ ಪಡುವಂತಾಗಿದೆ. ಮಹಾನಗರ ಪಾಲಿಕೆ ಇದರತ್ತ ಗಮನ ಹರಿಸಿ, ಜನರ ಬದುಕಿಗೆ ಬೆಳಕು ಕೊಡುವ ಪುಣ್ಯದ ಕೆಲಸ ಮಾಡಲಿ ಎಂದು ಹಾರೈಸುವೆ.
ಡಾ. ಎಸ್. ಶಿಶುಪಾಲ, ದಾವಣಗೆರೆ.