ಉಚಿತ ಶಿಕ್ಷಣ ಮತ್ತು ಆರೋಗ್ಯ ಬಡಜನರ ಸುಸ್ಥಿರ ಅಭಿವೃದ್ಧಿಗೆ ಪೂರಕ

ಉಚಿತ ಶಿಕ್ಷಣ ಮತ್ತು ಆರೋಗ್ಯ ಬಡಜನರ ಸುಸ್ಥಿರ ಅಭಿವೃದ್ಧಿಗೆ ಪೂರಕ

ಮಾನ್ಯರೇ,

ಇತ್ತೀಚಿನ ದಿನಗಳಲ್ಲಿ ಬಡ ಕುಟುಂಬಗಳ ಉಳಿತಾಯ ಕಡಿಮೆಯಾಗಿ, ಸಾಲಗಳು ದುಪ್ಪಟ್ಟಾಗುತ್ತಿವೆ. ದುಡಿದ ಹಣದಲ್ಲಿ ಹೆಚ್ಚು ಆರೋಗ್ಯ ಮತ್ತು ಶಿಕ್ಷಣಕ್ಕೆ ಖರ್ಚು ಮಾಡಬೇಕಾಗುತ್ತಿದೆ. ಪ್ರಸ್ತುತ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಿಗೆ 60 ಸಾವಿರ ಕೋಟಿ ಹಣ ಖರ್ಚಾಗುತ್ತಿದೆ. ಬಸ್ಸಿನ ಪ್ರಯಾಣ ಉಚಿತವಾದ್ದರಿಂದ ಅನಾವಶ್ಯಕ ಸುತ್ತಾಟಗಳಾಗ ಬಹುದು. ಈ ಯೋಜನೆಗಳನ್ನು ಒಂದೆರಡು ವರ್ಷಗಳ ಕಾಲ ಮುಂದುವರೆಸಿ ನಂತರ ಈ ಯೋಜನೆಗಳ ಬದಲು 60 ಸಾವಿರ ಕೋಟಿ ಹಣವನ್ನು ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ ಮತ್ತು ಆರೋಗ್ಯಕ್ಕೆ ವಿನಿಯೋಗಿಸಿದರೆ ಬಡವರಿಗೆ ಜೀವನದುದ್ದಕ್ಕೂ ಸಹಕಾರಿಯಾಗುತ್ತದೆ. ಓಟಿಗಾಗಿ ಗ್ಯಾರಂಟಿ ಸ್ಕೀಂ ಗಳು ಬೇಕೆನ್ನುವುದಾದರೆ ಇದಲ್ಲದೆ ಬೇರೆ 60 ಸಾವಿರ ಕೋಟಿಯನ್ನು ಆರೋಗ್ಯ ಮತ್ತು ಶಿಕ್ಷಣಕ್ಕಾಗಿಯೇ ಮೀಸಲಿಡಲು ಸರ್ಕಾರ ಮುಂದೆ ಹೆಜ್ಜೆ ಇಡಲಿ.  `ಆರೋಗ್ಯವೇ ಭಾಗ್ಯ’ ಶಿಕ್ಷಣ ಬಾಳು ನಡೆಸುವ ಜ್ಯೋತಿ’. ದೇಶದ ಜನರು ಆರೋಗ್ಯ, ಸುಶೀಕ್ಷಿತವಾಗಿದ್ದರೆ ಮಾನವ ಶಕ್ತಿ ಹಾಳಾಗದೆ ಸಮಾಜಕ್ಕೆ ಸಹಕಾರಿ ಯಾಗುತ್ತದೆ. ಮುಂದುವರೆದ  ದೇಶಗಳು ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದರಿಂದ ಆ ದೇಶಗಳು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲು ಸಹಕಾರಿ ಯಾಗಿದೆ. ದೆಹಲಿಯ ಆಪ್ ಸರ್ಕಾರ ಎಲ್ಲರಿಗೂ ಉಚಿತ ಆರೋಗ್ಯ, ಶಿಕ್ಷಣ ನೀಡಿ ವಿಶ್ವವಿಖ್ಯಾತವಾಗಿದೆ. ಅಲ್ಲದೆ ಆ ಪಕ್ಷದ ನಿರಂತರ ಗೆಲುವಿಗೂ ಕಾರಣವಾಗಿದೆ. ತಮಿಳು ನಾಡು ರಾಜ್ಯದಲ್ಲಿ ಉಚಿತ ಔಷಧಿ ವಿತರಣೆ ಯಶಸ್ವಿಯಾಗಿ ಬಡ ಜನರಿಗೆ ಬಹಳ ಅನುಕೂಲವಾಗಿದೆ. ಅದರಂತೆ ನಮ್ಮ ರಾಜ್ಯದಲ್ಲೂ ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ ಮತ್ತು ಆರೋಗ್ಯವನ್ನು ಉಚಿತವಾಗಿ ನೀಡಬೇಕು. 


 – ಶಿವನಕೆರೆ ಬಸವಲಿಂಗಪ್ಪ,  ಕರುಣಾ ಟ್ರಸ್ಟ್. ದಾವಣಗೆರೆ.

error: Content is protected !!