ದುಬಾರಿ ಶುಲ್ಕ ಇಳಿಸಿ

ಮಾನ್ಯರೇ, 

ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಲ್ಲಿ  65 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ಆರು ದರ್ಜೆಯ ಎಲ್ಲಾ ಹುದ್ದೆಗಳಿಗೂ ದುಬಾರಿ ಶುಲ್ಕ ವಿಧಿಸಿರುವುದು ಸರಿಯಲ್ಲ. ಸಾಮಾನ್ಯ ವರ್ಗ, ಹಿಂದುಳಿದ ವರ್ಗದವರಿಗೆ 1500 ರೂಪಾಯಿ  ಇದ್ದು , ಎಸ್ ಸಿ, ಎಸ್ ಟಿ ಅಭ್ಯರ್ಥಿಗಳಿಗೆ 750 ರೂಪಾಯಿ  ನಿಗದಿಪಡಿಸಲಾಗಿದೆ. ಕೆ.ಪಿ.ಎಸ್.ಸಿ ಪರೀಕ್ಷೆಗಳಿಗೆ ಹೋಲಿಸಿದರೆ ಈ ಶುಲ್ಕ ತುಸು ದುಬಾರಿ ಎನಿಸುತ್ತದೆ. ಕಳೆದ ತಿಂಗಳು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಸಹಕಾರ ಕೇಂದ್ರ  ಬ್ಯಾಂಕ್ ನಲ್ಲಿಯೂ ಅರ್ಜಿ ಆಹ್ವಾನಿಸಿದ್ದು ಶುಲ್ಕ 500, 1000 ರೂಪಾಯಿ ಇತ್ತು. ಕೊನೆಯ ಪಕ್ಷ ಹುದ್ದೆಯ ದರ್ಜೆಯ ಮೇಲೆಯಾದರೂ ಶುಲ್ಕ ನಿಗದಿಪಡಿಸಲಿ. ಸಹಾಯಕ ಪ್ರಧಾನ ವ್ಯವಸ್ಥಾಪಕರಿಗೂ ಒಂದೇ ಶುಲ್ಕ, ಅಟೆಂಡರ್, ಚಾಲಕ ಹುದ್ದೆಗಳಿಗೂ ಒಂದೇ ಶುಲ್ಕ ಎಂದರೆ ಹೇಗೆ? ಪರೀಕ್ಷಾ ಅಭ್ಯರ್ಥಿಗಳು ಕೆಲಸಕ್ಕೆ ಹೋಗುವಂತವರಾದರೇನೊ ಸರಿ. ಆದರೆ ಯಾವುದೇ ಕೆಲಸ ಮಾಡದೇ, ಉದ್ಯೋಗದ ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳಿಗೆ ಈ ಶುಲ್ಕ ತುಸು ಜಾಸ್ತಿಯೇ ಆಗುತ್ತದೆ . ದಯವಿಟ್ಟು ಸರ್ಕಾರ ಈ ದುಬಾರಿ ಶುಲ್ಕವನ್ನು ಇಳಿಸಿ, ಉದ್ಯೋಗ ಆಕಾಂಕ್ಷಿಗಳ ನೆರವಿಗೆ ನಿಲ್ಲಬೇಕಾಗಿದೆ.


– ಮುರುಗೇಶ ಡಿ., ದಾವಣಗೆರೆ.

error: Content is protected !!