ಮಕ್ಕಳ ಬಾಲ್ಯ ಕಸಿಯುತ್ತಿದ್ದೇವೆಯೇ ?

ಮಾನ್ಯರೇ,

ಇಂದಿನ ಯಾಂತ್ರಿಕ ಜೀವನದಲ್ಲಿನ ಜಂಜಾಟದಲ್ಲಿ ಮಹಾ ನಗರಗಳಲ್ಲಿ ಗಂಡ-ಹೆಂಡತಿಯರಿಬ್ಬರೂ ಒಟ್ಟಿಗೆ ದುಡಿದು ಸಂಸಾರ ಸಾಗಿಸುವ ಕಾಲವಿದು. ಅವರು ತಮ್ಮ ಮಕ್ಕಳನ್ನು  ಸಾಕಲು ಮನೆಯ ಕೆಲಸ ಮಾಡಲು ಸಹಾಯಕರನ್ನು ಇಟ್ಟುಕೊಂಡು ಕುಟುಂಬವನ್ನು ನಿರ್ವಹಿಸಬೇಕು.

ಈಗಿನ ಮಕ್ಕಳನ್ನು ಬಹಳ ಪ್ರೀತಿಯಿಂದ ಮುದ್ದು ಮಾಡಿ ತಂದೆ ತಾಯಿಗಳು ಬೆಳೆಸುತ್ತಾರೆ. ಬೆಳಗಿನಿಂದ ಸಂಜೆಯವರೆಗೂ ಮಕ್ಕಳನ್ನು ಬಿಟ್ಟಿರುವರು. ಅವರಿಗೆ ಸಿಕ್ಕ ಸಮಯದಲ್ಲಿ ಅತ್ಯಂತ ಕಾಳಜಿಯಿಂದ ಮಕ್ಕಳನ್ನು ನೋಡಿಕೊಳ್ಳುವರು. 

ಈಗಿನ ಮಕ್ಕಳಿಗೆ ಅಂಗಳದಲ್ಲಿ ಆಟವಾಡಲು ಅಂಗಳವೇ ಇಲ್ಲ ಬಹುಮಹಡಿ ಕಟ್ಟಡಗಳಲ್ಲಿದ್ದರೆ ನೆಲವು ಕಾಣುವುದಿಲ್ಲ. ಇನ್ನೂ ಮಕ್ಕಳಿದ್ದಾಗ ಮಣ್ಣಿನಲ್ಲಿ ಆಟವಾಡುವುದು, ಕೆಸರನ್ನೆಲ್ಲ ಕೈ ಮೈ ಮಾಡಿಕೊಳ್ಳುವುದು, ಎದ್ದು ಬಿದ್ದು ಓಡುವುದು ಇದೆಲ್ಲ ಇಲ್ಲವೇ ಇಲ್ಲ. 

ಈಗ ಶಾಲೆಗಳಲ್ಲಿ ಮೈದಾನಗಳಿಲ್ಲ ಮಕ್ಕಳನ್ನು ಶಾಲೆಗೆ ವಾಹನಗಳಲ್ಲಿ ಕಳುಹಿಸಿ ಕೊಡುವುದು ಶಾಲೆ ಬಿಟ್ಟ ನಂತರ ಮತ್ತೆ ಮನೆಗೆ ವಾಹನದಲ್ಲಿ ಬಿಡುವುದು. ಮನೆಗೆ ಬಂದ ಕೂಡಲೇ ಹೋಂವರ್ಕ್, ಓದು, ಬರೆಯುವ ಕೆಲಸ ಜೊತೆಗೆ ವಿಡಿಯೋ ಗೇಮ್‌, ಮೊಬೈಲ್ ನೋಡಿಕೊಂಡು ಆಟವಾಡುವರು.

ಮೊದಲ ದಿನಗಳ ಹಾಗೆ ಈಗಿನ ಮಕ್ಕಳು ಬೀದಿಗಳಲ್ಲಿ ಲಗೋರಿ, ಚಿನ್ನಿದಾಂಡು, ಚೆಂಡು, ಬುಗುರಿ, ಕಬಡ್ಡಿ, ಕಣ್ಣು ಮುಚ್ಚಾಲೆಯಾಟ, ಕುಂಟೆಬಿಲ್ಲೆ, ಖೋ ಖೋ, ಉಪ್ಪಮ್ಮ ಊಪ್ಪೊ, ಎಂಬ ಆಟಗಳನ್ನು ಆಡಲು ಅವಕಾಶವಿಲ್ಲವಾಗಿ ಹೋಗಿದೆ. ಇಂದು ಮಕ್ಕಳ ಬಾಲ್ಯ ಕಸಿಯಲಾಗುತ್ತಿದೆ. ಹೊರಗಿನ ಪ್ರಪಂಚದ ಅರಿವು ಅವರಿಗೆ ಇಲ್ಲವಾಗಿದೆ.


– ಹೆಚ್.ಕೆ. ಸತ್ಯಭಾಮ ಮಂಜುನಾಥ, ದಾವಣಗೆರೆ.

error: Content is protected !!