ಉಚಿತ ಬಸ್ ಪ್ರಯಾಣ ; ದಿನಂಪ್ರತಿ ಸಂಚರಿಸುವ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಸ್ಥಳಾವಕಾಶದ ಕೊರತೆ

ಮಾನ್ಯರೇ,

ಇತ್ತೀಚಿಗೆ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ  ಒಂದಾದ  ರಾಜ್ಯದ ಸರ್ಕಾರಿ ಬಸ್ಸಿನಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ ಸರಿಯಷ್ಟೇ. ಆದರೆ,  ಬಸ್ಸಿನಲ್ಲಿ  ನಿರೀಕ್ಷೆಯಂತೆ  ಹೆಚ್ಚು ಮಹಿಳೆಯರು ಜೂನ್ 14 ರಿಂದ ಪ್ರಯಾಣಿಸುತ್ತಿದ್ದು, ಇದರಿಂದ ಪುರುಷರಿಗೆ, ಶಾಲಾ  ವಿದ್ಯಾರ್ಥಿಗಳಿಗೆ ಹಾಗೂ  ದಿನಂಪ್ರತಿ  ಸಂಚರಿಸುವ ಮಹಿಳೆಯರಿಗೆ ಬಸ್ಸಿನಲ್ಲಿ  ಸ್ಥಳಾವಕಾಶದ  ಕೊರತೆಯಿಂದ ಸಮಸ್ಯೆ ಎದುರಾಗಿದೆ.

ಬಸ್ಸಿನಲ್ಲಿ ಪ್ರಯಾಣಕ್ಕಾಗಿ ನೂಕುನುಗ್ಗಲು ಸಾಮಾನ್ಯ ಎನಿಸಿದೆ. ಈ ನೂಕುನುಗ್ಗಲಿಗೆ ಹಾವೇರಿ ಜಿಲ್ಲೆಯ ಓರ್ವ ಪ್ರೌಢಶಾಲಾ  ವಿದ್ಯಾರ್ಥಿನಿ ಸಾವಿಗೆ ಬಲಿಯಾದ ವರದಿ ತಡವಾಗಿ ಸುದ್ದಿಯಾಗಿದೆ. ಸರ್ಕಾರಿ ಬಸ್ಸಿನಲ್ಲಿ ರಾಜ್ಯದ  ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣದ  ಸೌಲಭ್ಯ ಒದಗಿಸಿ, ಬಾಡಿಗೆ ಆಟೋರಿಕ್ಷಾ  ಚಾಲಕರಿಗೆ  ದುಡಿಮೆ ಇಲ್ಲದಂತಾಗಿದೆ. ಅನಾವಶ್ಯಕ ವಾಗಿ  ಮಹಿಳೆಯರು ಸರ್ಕಾರಿ ಬಸ್ಸಿನಲ್ಲಿ  ಸಂಚರಿಸುವುದರಿಂದ  ಪ್ರಯಾಣಿಕರ ಸಂಖ್ಯೆ ಹೆಚ್ಚಿ, ಶಾಲಾ-ಕಾಲೇಜು, ಕಛೇರಿ -ಕೋರ್ಟ್‌ಗಳಿಗೆ ಸಮಯಕ್ಕೆ  ಸರಿಯಾಗಿ  ಹೋಗುವವರಿಗೆ   ಸರ್ಕಾರಿ ಬಸ್ಸಿನ ಪ್ರಯಾಣ ಕಿರಿಕಿರಿ ಎನಿಸಿದೆ. ನಿರೀಕ್ಷೆಗಿಂತ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವುದರಿಂದ ಹೆಚ್ಚುವರಿ ಸರ್ಕಾರಿ ಬಸ್ ಸೇವೆ ಒದಗಿಸಿರಿ. ಹೆಚ್ಚುವರಿ ಪ್ರಯಾಣಿಕರು ಬಸ್ಸಿನಲ್ಲಿ ಸಂಚರಿಸುವುದರಿಂದ  ಚಾಲಕನ. ನಿರ್ಲಕ್ಷ್ಯ  ಅಥವಾ ಬಸ್ಸಿನ ಯಾಂತ್ರಿಕ ತೊಂದರೆಯಿಂದ Over Load ನಿಂದ ಆಕಸ್ಮಿಕವಾಗಿ ಅಪಘಾತ ಸಂಭವಿಸುವ  ಸಾಧ್ಯತೆಗಳು  ಎದುರಾಗಬಹುದು.


– ಜೆ.ಎಸ್. ಚಂದ್ರನಾಥ , ನೀಲಾನಹಳ್ಳಿ.

error: Content is protected !!