ಪಾಲಿಕೆ, ಶ್ರೀನಿವಾಸ್‌ಗೆ ಧನ್ಯವಾದ..

ಮಾನ್ಯರೇ,

ದಿನಾಂಕ 19-5-2023 ರಂದು ಸೇಸ್ಯಾಮ್ ಲೇ-ಔಟ್‌ನಲ್ಲಿ   ಕಸ ಹಾಕುತ್ತಿರುವುದನ್ನು ಬಡಾವಣೆ ನಿವಾಸಿಗಳು ನೋಡಿ ತಕ್ಷಣ  dvgcoa.karnatakasmartcity.in ಪೋರ್ಟಲ್‌ನಲ್ಲಿ ದೂರು ನೀಡಿದೆವು. ದೂರು ನೀಡಿದ  ದಿನವೇ ಕರೆಮಾಡಿ ನಮಗೆ ತಿಳಿಸಿದರು.

ಮರುದಿನವೇ  ಅಂದರೆ 20-5-2023ರ ಬೆಳಿಗ್ಗೆ 7 ಗಂಟೆಗೆ ಕಸವನ್ನು ತೆಗೆದು ಸ್ವಚ್ಛ ಮಾಡಿದ್ದಾರೆ. ಶೀಘ್ರ ಹಾಗೂ ಸ್ಪೂರ್ತಿದಾಯಕವಾಗಿ ನಮಗೆ ಸ್ಪಂದಿಸಿದ ಕಾರ್ಪೊರೇಟರ್ ಜೆ.ಎನ್.ಶ್ರೀನಿವಾಸ್ ಅವರಿಗೆ ಮತ್ತು ಪಾಲಿಕೆ ಸಿಬ್ಬಂದಿಗಳಿಗೆ ಸೇಸ್ಯಾಮ್ ಬಡಾವಣೆ ನಿವಾಸಿಗಳಿಂದ ಹೃದಯಪೂರ್ವಕ ಧನ್ಯವಾದಗಳು.


– ಮೊಹಮದ್ ಸಲೀಮ್, ಬಡಾವಣೆ ನಿವಾಸಿ

error: Content is protected !!