ನಿಮ್ಮ ಮತ ಕಸದ ಬುಟ್ಟಿಗೆ ನೀಡಿ..!?

ಜನರು ದಾರಿಯಲ್ಲಿ, ಖಾಲಿ ಸೈಟುಗಳಲ್ಲಿ, ಅಂಗಡಿಗಳ ಎದುರುಗಡೆ, ಬಸ್, ಟ್ರೈನ್ ಗಳಲ್ಲಿ ಹೀಗೆ ಎಲ್ಲಿ ಬೇಕೆಂದರಲ್ಲಿ ಕಸ ಹಾಕುತ್ತಾರೆ. ಯಾರಾದರೂ ಹೀಗೆಲ್ಲಾ ಕಸ ಹಾಕಬೇಡಿ ಎಂದು ಹೇಳಿದರೆ, ನೀವು ಯಾರು?  ನಮಗೆ   ಹೇಳೋದಕ್ಕೆ ಅಂತಾರೆ.  ಸ್ವಲ್ಪ ಒಳ್ಳೆಯವರಾದರೆ  ಮತ್ತೆ ಎಲ್ಲಿ ಹಾಕಬೇಕು? ಕಸದ ಬುಟ್ಟಿ ಎಲ್ಲೂ ಕಾಣಿಸುತ್ತಿಲ್ಲ ಎಂದು ಹೇಳುತ್ತಾರೆ.

 ಅದಕ್ಕೆ ಅವರುಗಳಿಗೆ ಹೇಳಬೇಕು ಅಂದರೆ ನನಗೆ ಅಧಿಕಾರ ಇರಬೇಕು. ಅದಕ್ಕೆ ನಾನು ಚುನಾವಣೆಗೆ ನಿಲ್ಲುವಾ ಅಂತ ಅಂದುಕೊಂಡಿದ್ದೇನೆ. ಮತ್ತೆ ಅವರುಗಳೆಲ್ಲಾ  ಕಸ ಹಾಕಲು ಕಸದ ಬುಟ್ಟಿ ಬೇಕಲ್ಲ. ಅದಕ್ಕೆ ಅದನ್ನೇ ಗುರುತು ಮಾಡಿಕೊಂಡಿದ್ದೇನೆ. 

ದಯವಿಟ್ಟು ನಿಮ್ಮ ಮತವನ್ನು `ಕಸದ ಬುಟ್ಟಿ’ ಗುರುತಿಗೆ ಹಾಕಿ.
ನಿಮ್ಮ ಸೇವೆ ಮಾಡಲು ಅವಕಾಶ ಮಾಡಿ ಕೊಡಿ. ಹೇಗಿದ್ದರೂ
ನೀವು ಯಾರಿಗೆ ಮತ ಹಾಕಿದರೂ ಅದು ಕಸದ ಬುಟ್ಟಿ ಸೇರಿದ ಹಾಗೆಯೇ ಆಗುತ್ತದೆ ಅಲ್ಲವೇ..?


ಮಮತಾ ನಾಗರಾಜ್
ದಾವಣಗೆರೆ.

error: Content is protected !!