ಕಾನೂನು ಚೌಕಟ್ಟು ಮೀರಿ ಸಂಪತ್ತು ಹೊಂದಿದ್ದರೆ ಅವರ ವಿರುದ್ಧ ಕ್ರಮ

ಕಾನೂನು ಚೌಕಟ್ಟು ಮೀರಿ ಸಂಪತ್ತು ಹೊಂದಿದ್ದರೆ ಅವರ ವಿರುದ್ಧ ಕ್ರಮ

ರಾಣೇಬೆನ್ನೂರು, ಮಾ.7- ನಮ್ಮ ಪಕ್ಷಕ್ಕೆ ಬಂದವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮಂತ್ರಿಗಳಾಗಿದ್ದಾರೆ. ಅವರು ಎಲ್ಲರೊಡನೆ ವಿಶ್ವಾಸದಿಂದಲೇ ಇದ್ದಾರೆ. ಆದರೆ ನಾರಾಯಣಗೌಡ್ರು ಮಾತ್ರ ಗಲಿಬಿಲಿ ಮಾಡಿಕೊಂಡಿದ್ದಾರೆ. ಯಾಕೋ ಗೊತ್ತಿಲ್ಲ, ಪಕ್ಷದ ಹಿರಿಯರು ಸರಿ ಮಾಡ್ತಾರೆ ಎಂದು ಸಚಿವ ಕೋಟಾ ಶ್ರೀ ನಿವಾಸ ಪೂಜಾರಿ ಹೇಳಿದರು.

ಅವರು ತಾಲ್ಲೂಕಿನ ಮಾಕನೂರ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೂ ಪೂರ್ವದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು.

ಚುನಾವಣೆ ಸನಿಹದ ಸಂದರ್ಭದಲ್ಲಿ ಇಂತಹ ಘಟನೆಗಳು ಸ್ವಾಭಾವಿಕ. ಇವು ಕೇವಲ ಬಿಜೆಪಿಯಲ್ಲಿಲ್ಲ ಎಲ್ಲ ಪಕ್ಷಗಳಲ್ಲೂ ನಡೆಯುತ್ತಿರುತ್ತವೆ. ಅವುಗಳನ್ನು ಸರಿಪಡಿಸಲು ಪಕ್ಷದ ವರಿಷ್ಠರಿದ್ದಾರೆ, ಪಕ್ಷದಲ್ಲಿ ಹಿರಿಯರಿದ್ದಾರೆ. ಅವರೆಲ್ಲ ನೋಡಿಕೊಳ್ಳುತ್ತಾರೆ. ವಿ.ಸೋಮಣ್ಣ ಎಲ್ಲೂ ಹೋಗಲ್ಲಾ, ನಮ್ಮ ಜೊತೆಗೇನೇ ಇರ್ತಾರೆ ಎಂದು ಸಚಿವ ಪೂಜಾರಿ ಹೇಳಿದರು.

ಲೋಕಾಯುಕ್ತದ ಎಲ್ಲ ಅಧಿಕಾರ ಕಿತ್ತುಕೊಂಡ ಕಾಂಗ್ರೆಸ್ ಸರ್ಕಾರ ಕೇವಲ ಬೋರ್ಡ್ ಮಾತ್ರ ಇಟ್ಟಿತ್ತು. ಕಾಂಗ್ರೆಸ್ ಎಸಿಬಿ ರಚಿಸುವ ಮೂಲಕ ರಾಜಕಾರಣಿಗಳನ್ನು ಲೋಕಾಯುಕ್ತದಿಂದ ಹೊರತಂದಿತ್ತು. ಹೈಕೋರ್ಟ್ ನಿರ್ದೇಶನದಂತೆ ಲೋಕಾಯುಕ್ತಕ್ಕೆ ನಾವು ಶಕ್ತಿ ತುಂಬಿದ್ದೇವೆ. ಭ್ರಷ್ಟಾಚಾರಿಗಳನ್ನು  ರಕ್ಷಿಸುವುದಾಗಿದ್ದರೆ ನಮ್ಮ ಸರ್ಕಾರ ಶಕ್ತಿ ತುಂಬುವ ಕೆಲಸ ಮಾಡದೇ ಸುಪ್ರಿಂ ಕೋರ್ಟ್ ಮೊರೆ ಹೋಗುತ್ತಿದ್ದೆವು ಎಂದು ಸಚಿವ ಪೂಜಾರಿ ಹೇಳಿದರು.

ಕಾನೂನು ಚೌಕಟ್ಟು ಮೀರಿ  ಸಂಪತ್ತು ಹೊಂದಿದ್ದರೆ ಅಂತವರ ಅಧಿಕಾರ, ಅಂತಸ್ತು, ಪಕ್ಷ ಯಾವುದನ್ನೂ ಗಮನಕ್ಕೆ ತೆಗೆದುಕೊಳ್ಳದೆ ಅವರ ಆಸ್ತಿ, ಅಂತಸ್ತುಗಳ ಮೇಲೆ ರೈಡ್ ಮಾಡುವುದು, ಕಾನೂನು ಕ್ರಮ ಜರುಗಿಸುವುದು ಲೋಕಾಯುಕ್ತದ ಕೆಲಸ. ಇಲ್ಲಿ ಯಾರನ್ನೂ ರಕ್ಷಿಸುವ ಕೆಲಸ ನಡೆಯಲ್ಲ ಎಂದು ವಿವರಿಸಿದ ಸಚಿವ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್‌ನವರ ಬಹಳಷ್ಟು ಮುಖಂಡರ ಕನಸಲ್ಲಿ ಅಮಿತ್ ಶಾ ಬರುವುದರಿಂದ ಅವರ ಹೆಸರು ಜಪಿಸುತ್ತಾರೆ. ಮಾಡಾಳು ವಿರುಪಾಕ್ಷಪ್ಪ ಮೇಲೆ ಕಾನೂನು ಕ್ರಮ ಜರುಗಲಿದೆ ಎಂದು ಹೇಳಿದರು.  ಶಾಸಕ ಅರುಣಕುಮಾರ ಪೂಜಾರ ಜೊತೆಗಿದ್ದರು.

error: Content is protected !!