ರಾಣೇಬೆನ್ನೂರು : ಕೆರೆಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ

ರಾಣೇಬೆನ್ನೂರು : ಕೆರೆಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ

ರಾಣೇಬೆನ್ನೂರು, ಫೆ. 22- ಭವಿಷ್ಯದಲ್ಲಿ ನೀರಿನ ಅಭಾವ ಉಂಟಾಗದಂತೆ ಕೆರೆಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಸಂಸ್ಥೆ ವತಿಯಿಂದ ತಾಲ್ಲೂಕಿನಲ್ಲಿ ಪ್ರತಿ ವರ್ಷ ಒಂದು ಕೆರೆಯ ಪುನಃಶ್ಚೇತನ ಕಾಮಗಾರಿ ನಡೆಸಲಾಗುತ್ತಿದ್ದು, ಇದುವರೆಗೂ ರಾಜ್ಯದಲ್ಲಿ 519 ಕೆರೆಗಳ ಪುನಃಶ್ಚೇತನ ಕಾಮಗಾರಿ ಮಾಡಲಾಗಿದೆ ಎಂದು ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ತಿಳಿಸಿದರು.

ಅವರು ರಾಣೇಬೆನ್ನೂರು ತಾಲ್ಲೂಕಿನ ಮಾಗೋಡು ಗ್ರಾಮದ ದೊಡ್ಡಕೆರೆಯ ಪುನಃ ಶ್ಚೇತನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕಳೆದ 6 ವರ್ಷಗಳ ಹಿಂದೆ ಸಕಲ ಜೀವ ಸಂಕು ಲಕ್ಕೆ ಜೀವಜಲ ಒದಗಿಸಲು ಹಾಗೂ ಅಂತರ್ಜಲ ವೃದ್ಧಿಸಲು ಧರ್ಮಾಧಿಕಾರಿಗಳು ಕೆರೆ ಹೂಳೆತ್ತುವ ಯೋಜನೆ ಆರಂಭಿಸಿದ್ದು, ಈ ಕೆಲಸದಲ್ಲಿ ಸ್ಥಳೀಯ ಇಲಾಖೆಗಳು ಹಾಗೂ ಗ್ರಾಮಸ್ಥರ ಸಹಕಾರವೂ ತೀರಾ ಅಗತ್ಯವಿದೆ ಎಂದು ನಾಗರಾಜ ಶೆಟ್ಟಿ ನುಡಿದರು.

error: Content is protected !!