ಮಳೆ ಹಾನಿ ಶೀಘ್ರವೇ ಪರಿಹಾರ : ಬಿ.ಸಿ.ಪಾಟೀಲ್

ರಾಣೇಬೆನ್ನೂರಿನಲ್ಲಿ ಕೃಷಿ ಉಪನಿರ್ದೇಶಕರ ಕಛೇರಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಹಾಗೂ ರೈತ ಸಂಜೀವಿನಿ ವಾಹನ ಲೋಕಾರ್ಪಣೆ

ರಾಣೇಬೆನ್ನೂರು, ಜ.10 – ಅಕಾಲಿಕ ಮಳೆಯಿಂದ ಹಾನಿಗೊಳಗಾದ ರೈತರಿಗೆ ಸರ್ಕಾರ ಶೀಘ್ರದಲ್ಲೇ ಪರಿಹಾರ ನೀಡಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ರಾಣೇಬೆನ್ನೂರಿನಲ್ಲಿ ಕೃಷಿ ಉಪನಿರ್ದೇಶಕರ ಕಛೇರಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಹಾಗೂ ರೈತ ಸಂಜೀವಿನಿ ವಾಹನ ಲೋಕಾರ್ಪಣೆ  ಮಾಡಿ ಮಾತನಾಡಿದರು.

ಚಂಡಮಾರುತದಿಂದಾಗಿ ಮಳೆ ಯಾಗಿ ಹೊಲದಲ್ಲಿದ್ದ ಫಸಲು ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತ ಚಿಂತೆಗೀಡಾದ ಪರಿಸ್ಥಿತಿ ಎದು ರಾಗಿದೆ. ರೈತರು ಈ ಬಗ್ಗೆ ಎದೆಗುಂದದಿರಿ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಬಲಿಯಾ ಗಬೇಡಿ. ಸರ್ಕಾರ ನಿಮ್ಮ ಜೊತೆಗಿದೆ ಎಂದು ಸಚಿವ ಪಾಟೀಲ ಹೇಳಿದರು.

ಕೋವಿಡ್‌ನಿಂದಾಗಿ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದ್ದರೂ ಸಹ, ಮುಖ್ಯಮಂತ್ರಿಗಳು ಅಭಿವೃದ್ಧಿ ಕಾಮಗಾರಿಗಳಿಗೆ ಹಿಂದೇಟು ಹಾಕುತ್ತಿಲ್ಲ. ಸ್ವಾಭಿಮಾನಿ ರೈತರನ್ನಾಗಿಸಲು 40 ರೈತ ಸಂಜೀವಿನಿ ವಾಹನಗಳು, ಗುರುತಿನ ಚೀಟಿ ಮುಂತಾದ ಕಾರ್ಯಕ್ರಮಗಳೊಂ ದಿಗೆ ರೈತರನ್ನು ಸ್ವಾವಲಂಬಿಗಳನ್ನಾಗಿಸುವ ಪ್ರಯತ್ನವನ್ನು ಸರ್ಕಾರ ನಡೆಸಿದೆ ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ಹರಪನಹಳ್ಳಿ, ಚಳ್ಳಕೆರೆ ಯಲ್ಲಿ ಮಾತ್ರ ಉಪನಿರ್ದೇಶಕರ ಕಛೇರಿ ಕಟ್ಟಡಗಳಿದ್ದು, ಇಲ್ಲಿ ಕಟ್ಟಲಾಗುತ್ತಿರು ವುದು 3ನೇಯ ಕಟ್ಟಡ. ಸಚಿವರ ರೈತಪರ ಕಾಳಜಿಯಿಂದಾಗಿ ಇದಕ್ಕೆ ಒಂದು ಕೋಟಿ ಹಣ ಒದಗಿಸಿದ್ದು, ಶೀಘ್ರವಾಗಿ ನಿರ್ಮಾಣವಾಗಲಿದೆ ಎಂದು ಇಲಾಖೆಯ ಉಪನಿರ್ದೇಶಕರಾದ ಸ್ಫೂರ್ತಿ ಸ್ವಾಗತ ಭಾಷಣದಲ್ಲಿ ವಿವರಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಏಕನಾಥ ಭಾನುವಳ್ಳಿ ಶಾಸಕರಾದ ಅರುಣಕುಮಾರ ಪೂಜಾರ, ವಿರುಪಾಕ್ಷಪ್ಪ ಬಳ್ಳಾರಿ, ಜಿ.ಪಂ ಸದಸ್ಯ ಶಿವಾನಂದ ಕನ್ನಪ್ಪಳವರ, ಗದಿಗೆವ್ವ ದೇಸಾಯಿ, ತಾ.ಪಂ ಅಧ್ಯಕ್ಷೆ ಗೀತಾ ಲಮಾಣಿ, ಉಪಾಧ್ಯಕ್ಷೆ ಕಸ್ತೂರಿ ಹೊನ್ನಾಳಿ, ಎ ಡಿ ಗೌಡಪ್ಪಳವರ, ಎಸ್.ಎಸ್. ರಾಮಲಿಂಗಣ್ಣನವರ ಹಾಗೂ ಇತರೆ ಅಧಿಕಾರಿಗಳು ಇದ್ದರು.

error: Content is protected !!